ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸ್ವಚ್ಛ ಆಡಳಿತಕ್ಕಾಗಿ ಬಡಿದೆಬ್ಬಿಸಿ: ಡಿಸಿ

Rashmi Kasaragodu
Updated On : 11 Jul 2013, 12:58 pm

ತುಮಕೂರು: ಸ್ವಚ್ಛ ಆಡಳಿತ ನೀಡುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವನ್ನು ಬಡಿದೆಬ್ಬಿಸುವ ಜವಾಬ್ದಾರಿ ಮಾಧ್ಯಮದ್ದು. ಜಿಲ್ಲಾಡಳಿತ ಎಂದರೆ ಟೀಂ ವರ್ಕ್ ಇದ್ದಂತೆ. ಸ್ವಚ್ಛ ಆಡಳಿತಕ್ಕಾಗಿ ಜಿಲ್ಲಾಡಳಿತವನ್ನು ಬಡೆದೆಬ್ಬಿಸಲೇ ಬೇಕಾದ ಕರ್ತವ್ಯ ಪತ್ರಕರ್ತರದ್ದು. ಇದರಲ್ಲಿ ಯಾವುದೇ ರಾಜಿ ಬೇಡ. ಲೋಪ-ದೋಷಗಳು ಕಂಡು ಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಸತ್ಯಮೂರ್ತಿ ಭರವಸೆ ನೀಡಿದರು.



ಸತ್ಯಮೂರ್ತಿಗೆ ಸೂಚನೆ
ತುಮಕೂರು: ಅನಧಿಕೃತ ಬಿಪಿಎಲ್ ಕಾರ್ಡ್ದಾರರನ್ನು ಗುರುತಿಸಿ ಪಟ್ಟಿಯಿಂದ ವಜಾಗೊಳಿಸುವಂತೆ, ರಂಗೋಲಿ ಕೆಳಗೆ ತೂರುವವರನ್ನು ನಿಗ್ರಹಿಸುವಂತೆ, ಸತ್ಯ ಎತ್ತಿ ಹಿಡಿಯುವಂತೆ, ಪ್ರಾಮಾಣಿಕತೆ ಪ್ರದರ್ಶಿಸುವಂತೆ, ಕಾರ್ಯಕ್ರಮ ಸಮರ್ಪಕ ಜಾರಿಗೆ ಶ್ರಮವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರಿಗೆ ಸೂಚಿಸಿದರು. ಅವರು ಅನ್ನಭಾಗ್ಯ ಯೋಜನೆ ಚಾಲನಾ ಕಾರ್ಯಕ್ರಮದಲ್ಲಿ ಮಾತನಾಡಿ, ಅರ್ಹ ಬಡಜನತೆಗೆ ಅನ್ನಭಾಗ್ಯ ಯೋಜನೆ ತಲುಪಬೇಕು. ಫಲಾನುಭವಿಗಳಿಗೆ ಮೋಸವಾಗಬಾರದು. ಆರೋಪಗಳು ಕೇಳಂ ಬಂದ ಸಂದರ್ಭದಲ್ಲಿ ಸ್ವತಃ ಜಿಲ್ಲಾಧಿಕಾರಿಗಳು ಆಸಕ್ತಿ ವಹಿಸಿ ಸಮಸ್ಯೆ ಬಗೆಹರಿಸಬೇಕು. ಪ್ರಾಮಾಣಿಕತೆ ಪ್ರದರ್ಶಿಸಬೇಕು. ಈ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಬಿಪಿಎಲ್ ಅನರ್ಹರನ್ನು ಪಟ್ಟಿಯಿಂದ ಹೊರಗಿಡಲು ಸಹಕರಿಸಬೇಕು. ಕಾರ್ಯಕ್ರಮ ಜಾರಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಸಚಿವ ಜಯಚಂದ್ರ ಕರೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement