ತುರುವೇಕೆರೆ ತಾ.ಪಂ.ಅಧ್ಯಕ್ಷರಾಗಿ ಲಕ್ಷ್ಮೀಕಾಂತ್ ಅವಿರೋಧ ಆಯ್ಕೆ
ತುರುವೇಕೆರೆ: ತಾಲೂಕು ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಗೋಣಿತುಮಕೂರು ಕ್ಷೇತ್ರದ ಲಕ್ಷ್ಮೀಕಾಂತ್ ಅವಿರೋಧವಾಗಿ ಆಯ್ಕೆಯಾದರು.
ಈ ಹಿಂದೆ ಅಧ್ಯಕ್ಷರಾಗಿದ್ದ ಎಂ.ಡಿ.ರಮೇಶ್ ಗೌಡರು ಒಡಂಬಡಿಕೆಯನ್ವಯ ನೀಡಿದ್ದ ರಾಜಿನಾಮೆಯಿಂದಾಗಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. Ú ಚುನಾವಣೆಯಲ್ಲಿ ಲಕ್ಷ್ಮೀಕಾಂತ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ತಾಲೂಕು ಪಂಚಾಯ್ತಿಯ 17 ಸ್ಥಾನಗಳಲ್ಲಿ 15 ಸ್ಥಾನ ಜೆಡಿಎಸ್ಗೆ ಸಿಂಹ ಪಾಲಿದೆ. ಉಳಿದ 2 ಬಿಜೆಪಿಯದು.
ತಾಲ್ಲೂಕು ಪಂಚಾಯತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಲಕ್ಷ್ಮೀಕಾಂತ್ ಅವರನ್ನು ಜಿಲ್ಲಾ ಪಂಚಾಯ್ತಿ ಸದಸ್ಯರಾದ ಜಗದೀಶ್, ಶ್ರೀನಿವಾಸ್, ಲತಾ ವಿಶ್ವನಾಥ್, ಎಪಿಎಂಸಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಸದಸ್ಯರಾದ ಕುಶಾಲ್ ಕುಮಾರ್, ಶಂಕರೇಗೌಡ, ಜೆಡಿಎಸ್ ಅಧ್ಯಕ್ಷ ಸ್ವಾಮಿ ಮೊದಲಾದವರು ಅಭಿನಂದಿಸಿದರು. ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ ಶಾಸಕ ಎಂ.ಟಿ.ಕೃಷ್ಣಪ್ಪ ಹಾಗೂ ಎಲ್ಲಾ ತಾಲೂಕು ಪಂಚಾಯ್ತಿ ಸದಸ್ಯರಿಗೆ ನೂತನ ಅಧ್ಯಕ್ಷ ಲಕ್ಷ್ಮೀಕಾಂತ್ ಕೃತಜ್ಞತೆ ಸಲ್ಲಿಸಿದರು.