ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ನೌಕರ ವರ್ಗ ಪ್ರಾಮಾಣಿಕವಾಗಿದ್ದರೆ ರಾಜಕಾರಣಿಗಳು ಭ್ರಷ್ಟರಾಗಲ್ಲ'

Rashmi Kasaragodu
Updated On : 12 Jul 2013, 12:13 pm

ತಿಪಟೂರು: ಮತದಾರರು ಮತ್ತು ನೌಕರರ ವರ್ಗ ಪ್ರಾಮಾಣಿಕವಾಗಿದ್ದರೆ ರಾಜಕಾರಣಿಗಳು ಭ್ರಷ್ಟರಾಗುವುದು ಕಡಿಮೆಯಾಗಬಹುದು. ಈ ನಿಟ್ಟಿನಲ್ಲಿ ಮತದಾರರು ಚುನಾವಣೆಯಲ್ಲಿ ಯಾವುದೇ ಆಮಿಷಕ್ಕೆ ಒಳಗಾಗದೆ ಮತದಾನ ಮಾಡಿದಲ್ಲಿ ಹಾಗೆಯೇ ನೌಕರರು ಸಾರ್ವಜನಿಕರ, ಅಸಹಾಯಕರ ಕೆಲಸ ಕಾರ್ಯಗಳನ್ನು ವಿನಾ ಕಾರಣ ಅಲೆದಾಡಿಸದೆ ಶೀಘ್ರವಾಗಿ ಮಾಡಿಕೊಟ್ಟಲ್ಲಿ ರಾಜಕಾರಣಿಗಳು ಭ್ರಷ್ಟರಾಗಬೇಕಿಲ್ಲ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.
 ನಗರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ವತಿಯಿಂದ ನಡೆದ ಸಮುದಾಯ ಭವನದ ನೆಲಮಹಡಿ ಕಟ್ಟಡದ ಉದ್ಘಾಟನೆ, ನಿವೃತ್ತ ನೌಕರರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರಿ ನೌಕರರ ವರ್ಗಾವಣೆ ವಿಷಯದಲ್ಲಿ ಶಾಸಕರ ಮೇಲೆ ಒತ್ತಡ ಬರುತ್ತವೆ. ಈ ವಿಷಯದಲ್ಲಿ ಶಾಸಕರನ್ನೂ ಅನುಮಾನದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಭ್ರಷ್ಟಾಚಾರವನ್ನು ಹತ್ತಿಕ್ಕಲು ಸರ್ಕಾರಿ ನೌಕರರ ಪಾತ್ರ ಬಹುಮುಖ್ಯ. ನೌಕರರು ಆತ್ಮಸಾಕ್ಷಿಯಿಂದ ಜನಾರ್ದನನ ಸೇವೆಯಲ್ಲಿ ತೊಡಗಬೇಕು. ಜನಪ್ರತಿನಿಧಿಗಳು ಮತ್ತು ನೌಕರರು ಒಟ್ಟಿಗೆ ಸಹಮತದಿಂದ ಕೆಲಸ ನಿರ್ವಹಿಸಿದಲ್ಲಿ ಭ್ರಷ್ಟಾಚಾರ ಮುಕ್ತ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯ ಎಂದರು.
ಸಿಎಂ ಭರವಸೆ: ಕರ್ನಾಟಕ ರಾಜ್ಯ ಹಾಗೂ ಜಿಲ್ಲಾ ಸಂಘದ ಗೌರವಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಸಣ್ಣಮುದ್ದಯ್ಯ ಮಾತನಾಡಿ ಸರ್ಕಾರಿ ನೌಕರರ ಬಹುತೇಕ ಬೇಡಿಕೆಗಳನ್ನು ಸರ್ಕಾರ ಈಡೇರಿಸಿದ್ದು ಕೆಲವೇ ಬೇಡಿಕೆಗಳು ಮಾತ್ರ ಉಳಿದುಕೊಂಡಿದ್ದು, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಅವುಗಳನ್ನೂ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ. ಆದ್ದರಿಂದ ನೌಕರರು ಹಗಲಿರುಳೂ ಸಾರ್ವಜನಿಕರ, ಅಶಕ್ತರ ಕೆಲಸಗಳನ್ನು ಅಲೆಸದೆ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರ ಹಾಗೂ ನೌಕರ ವರ್ಗಕ್ಕೆ ಉತ್ತಮ ಹೆಸರು ತಂದುಕೊಡಬೇಕೆಂದರು. ಸಂಘದ ತಾ.ಅಧ್ಯಕ್ಷ ಕೆ.ಎಂ. ರಾಜಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಾರಂಭದಲ್ಲಿ ನಿವೃತ್ತ  ಆರೋಗ್ಯ ಶಿಕ್ಷಣಾಧಿಕಾರಿ ಜಿ.ಕೆ.ಕುಲಕರ್ಣಿ ನೌಕರರನ್ನು ಕುರಿತು ಉಪನ್ಯಾಸನೀಡಿದರು.
ರಾಜ್ಯ ಸಂಘಧ ಉಪಾಧ್ಯಕ್ಷ ಜವರೇಗೌಡರು, ರಾಜ್ಯ ಸಂಘದ ಖಜಾಂಚಿ ಯೋಗಾನಂದ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ, ಡಾ.ಜಯದೇವಪ್ಪ, ಚಂದ್ರಶೇಖರಯ್ಯ ಮತ್ತಿತರರಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement