ಅನ್ನಭಾಗ್ಯ ಯೋಜನೆ ಉದ್ಘಾಟನೆ
ತಿಪಟೂರು: ನಗರದ ಟಿ.ಎ.ಪಿ.ಎಂ.ಎಸ್ ಕಚೇರಿಯಲ್ಲಿ ಅನ್ನಭಾಗ್ಯ ಯೋಜನೆ ಉದ್ಘಾಟನೆಯು ಶಾಸಕ ಕೆ.ಷಡಕ್ಷರಿಯವರ ನೇತೃತ್ವದಲ್ಲಿ ಶನಿವಾರ ಬೆಳಿಗ್ಗೆ 11ಗಂಟೆಗೆ ನಡೆಯಲಿದೆ ಎಂದು ತಹಸೀಲ್ದಾರ್ ಬಿ.ಆರ್. ಈ ಕಾರ್ಯಕ್ರಮಕ್ಕೆ ತಾಲೂಕಿನ ಜಿ.ಪಂ., ತಾ.ಪಂ. ಹಾಗೂ ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಎಫ್ಎ ಪದವಿಗೆ ಅರ್ಜಿ ಆಹ್ವಾನ
ತುಮಕೂರು: ತುಮಕೂರು ವಿಶ್ವವಿದ್ಯಾನಿಲಯದ ಲಲಿತಕಲೆ ಪದವಿ (ಬಿಎಫ್ಎ) ತರಗತಿಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿಶ್ವವಿದ್ಯಾನಿಲಯದ ಭಾರತರತ್ನ ಡಾ. ಎಂ. ಎಸ್. ಸುಬ್ಬುಲಕ್ಷ್ಮೀ ಲಲಿತ ಕಲಾ ವಿಭಾಗದಲ್ಲಿ ಎರಡು ವರ್ಷಗಳ ಫೌಂಡೇಶನ್ ಕೋರ್ಸ್ ಹಾಗೂ ಮೂರು ವರ್ಷಗಳ ಬಿಎಫ್ಎ ಪದವಿ ಕೋರ್ಸ್ಗಳಿದ್ದು, ಪ್ರವೇಶ ಬಯಸುವ ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳಿಗಾಗಿ ಡಾ. ಸಿದ್ಧಲಿಂಗಸ್ವಾಮಿ ಹಿರೇಮಠ, ಭಾರತರತ್ನ ಡಾ. ಎಂ. ಎಸ್. ಸುಬ್ಬುಲಕ್ಷ್ಮೀ ಆರ್ಟ್ ಗ್ಯಾಲರಿ, ಲಲಿತ ಕಲೆ, ಎನಿಮೇಶನ್ ಮತ್ತು ವಿನ್ಯಾಸ ಕೇಂದ್ರ, ತುಮಕೂರು ವಿಶ್ವವಿದ್ಯಾನಿಲಯ ಇವರನ್ನು ಸಂಪರ್ಕಿಸಬಹುದು.
ರೋಟರಿ ಪದವಿ ಸ್ವೀಕಾರ ಸಮಾರಂಭ
ಚಿಕ್ಕನಾಯಕನಹಳ್ಳಿ: ವಿಶ್ವದಾದ್ಯಂತ ತನ್ನ ಸೇವೆಯಿಂದ ಹೆಸರುವಾಸಿಯಾಗಿರುವ ರೋಟರಿ ಸಂಸ್ಥೆಯ ತಾಲೂಕು ಘಟಕ ಪದವಿ ಸ್ವೀಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಜು.14ರಂದು ಭಾನುವಾರ ಸಂಜೆ 5.30 ಗಂಟೆಗೆ ಪಟ್ಟಣದ ಕಲ್ಪವೃಕ್ಷ ಕೋ-ಆಪರೆಟಿವ್ ಬ್ಯಾಂಕ್ ಸಪ್ತಪತಿ ಸಭಾಂಗಣದಲ್ಲಿ ಏರ್ಪಡಿಸಿರುವ ಪದಗ್ರಹಣ ಸಮಾರಂಭದ ಉದ್ಘಾಟನೆಯನ್ನು ಕೆ.ಸಿ.ಡಿ.ಎ.ನಿರ್ದೇಸಕರು ಹಾಗೂ ಅತಿಥಿ ಉಪನ್ಯಾಸಕರು ಕಲ್ಪತರು ಕಾಲೇಜು ತಿಪಟೂರು ನೆರವೇರಿಸಲಿದ್ದಾರೆ.ಪದವಿ ಪ್ರದಾನ ಮತ್ತು ಹೋಸ ಸದಸ್ಯರ ಸೇರ್ಪಡೆಯನ್ನು ರೋ.ಕೆ.ಪಿ.ನಾಗೇಶ್,ಇಂಟರಾಕ್ಟ್ ಮತ್ತು ಕಿಂಡರಾಕ್ಟ್ ಪದವಿ ಪ್ರದಾನವನ್ನು ಅಸಿಸ್ಟೆಂಟ್ ಗರ್ವನರ್ ರೊ.ಜಯರಾಂ, ನಾಯಕ ಮತ್ತು ರೋಟರಿ ನೂತನ ವೆಬ್ ಸೈಟ್ ಬಿಡುಗಡೆ ರೊ.ಎಚ್.ಆರ್.ಶ್ರೀನಾಥ್ ಬಾಬು, ರೋಟರಿಯಲ್ಲಿ ತೊಡಗಿಸಿಕೊಳ್ಳಿ -ಜೀವನವನ್ನು ಉತ್ತಮ ಪಡಿಸಿಕೊಳ್ಳಿ ಬಗ್ಗೆ ಉಪನ್ಯಾಸ, ವಿದ್ಯಾವಾಚಸ್ಪತಿ ಕವಿತಾಕೃಷ್ಣ ನಡೆಸಿಕೊಡಲಿದ್ದಾರೆ.