ಟೇಕ್ವಾಂಡೊ ಚಾಂಪಿಯನ್ಷಿಪ್: ರಾಜ್ಯ ಮಟ್ಟಕ್ಕೆ ಆಯ್ಕೆ
ಕ.ಪ್ರ. ವಾರ್ತೆ ತಿಪಟೂರು ಜು.13
ತುಮಕೂರಿನ ಮಹಾತ್ಮಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಕರ್ನಾಟಕ ಟೇಕ್ವಾಂಡೊ ಫೆಡರೇಷನ್ ವತಿಯಿಂದ ನಡೆದ ಜಿಲ್ಲಾ ಮಟ್ಟದ ಟೇಕ್ವಾಂಡೊ ಚಾಂಪಿಯನ್ಷಿಪ್ನಲ್ಲಿ ತಿಪಟೂರಿನ ದೇವಿ ಟೇಕ್ವಾಂಡೊ ಸೆಂಟರ್ನ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆಂದು ಜಿಲ್ಲಾ ಟೇಕ್ವಾಂಡೋ ಅಸೋಸಿಯೇಷನ್ ಕಾರ್ಯದರ್ಶಿ ತಿಳಿಸಿದ್ದಾರೆ.
ದೇವಿ ಟೇಕ್ವಾಂಡೊ ಸೆಂಟರ್ನ ವಿದ್ಯಾರ್ಥಿಗಳು ಚಾಂಪಿಯನ್ಷಿಪ್ ನಲ್ಲಿ ಒಟ್ಟು 13 ಚಿನ್ನ, 9 ಬೆಳ್ಳಿ ಮತ್ತು 2ಕಂಚಿನ ಪದಕಗಳನ್ನು ಗಳಿಸುವ ಮೂಲಕ ತಾಲೂಕಿಗೆ ಕೀರ್ತತಂದಿದ್ದಾರೆ. ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯ ಮಟ್ಟಕ್ಕೆ ತುಮಕೂರು ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ.