ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಾನವ ಸಂಬಂಧ ಗಟ್ಟಿಗೊಳಿಸುವ ಅನಿವಾರ್ಯತೆ ಇದೆ: ಶೈಲಾ ನಾಗರಾಜ್

Rashmi Kasaragodu
Updated On : 13 Jul 2013, 12:45 pm

ತುಮಕೂರು: ಇಂದು ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವ ಅನಿವಾರ್ಯತೆ ಇದೆ ಎಂದು ಲೇಖಕಿ ಬಿ.ಸಿ. ಶೈಲಾ ನಾಗರಾಜ್ ಅಭಿಪ್ರಾಯಪಟ್ಟರು. ಅವರು ಇಲ್ಲಿನ ರಾಮಮಂದಿರದಲ್ಲಿ ಜಿಲ್ಲಾ ಮಹಿಳಾ ಸಂಘಟನೆ ಆಯೋಜಿಸಿದ್ದ ವಿಶ್ವ ಸೌಹಾರ್ದತ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸೌಹಾರ್ದತೆಯನ್ನು ಸಾಧಿಸುವ ಹಾದಿಯಲ್ಲಿ ಮೊದಲು ಮನಸ್ಸುಗಳನ್ನು ಕಟ್ಟಬೇಕು. ಜಾತಿ, ಮತ, ಧರ್ಮಗಳನ್ನು ಮೀರಿದ ಮಾನವೀಯತೆ ಪ್ರತಿಯೊಬ್ಬರ ನಡೆಯಾದಾಗ ಪರಸ್ಪರರಲ್ಲಿ ಸೌಹಾರ್ದ ಮನೋಭಾವ ತಾನೇ ತಾನಾಗಿ ಉಂಟಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಜನಮುಖಿಯಾಗಿ ಚಿಂತಿಸಬೇಕು ಎಂದರು  ರಾಷ್ಟ್ರೀಯ ಭಾವೈಕ್ಯತೆಯನ್ನು ಕಾಪಾಡುವಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು. ನಮ್ಮ ದಾರ್ಶನಿಕರು, ಕವಿಗಳು ಸಾರಿರುವ ವಿಶ್ವ ಮಾನವ ಸಂದೇಶವನ್ನು ಅನುಸರಿಸಿ ಬದುಕಿದಾ ಸೌಹಾರ್ದತೆ ತಾನೇ ತಾನಾಗಿ ಮೈಗೂಡುತ್ತದೆ ಎಂದರು. ಸಮಾಜ ಸೇವಕಿ ನಾಗರತ್ನ, ಅಭಿದಾ ಸೌಹರ್ದತಾ ಗೀತೆಗಳನ್ನು ಹಾಡಿದರು. ಜತೆಗೆ ಕುವೆಂಪು ಅವರ ವಿಶ್ವ ಮಾನವ ಗೀತೆಯನ್ನು ಹಾಡಿದರು. ಸೌಭಾಗ್ಯ, ಸಾಹಿತ್ಯ ಪರಿಷತ್ನ ಸುಮಶ್ರೀ, ಹರ್ಷ ವೇದಿಕೆಯಲ್ಲಿದ್ದರು. ರಾಧಾ ಸಂಪತ್ ಸಂಗಡಿಗರು. ಲಕ್ಷಮ್ಮ ಸ್ವಾಗತಿಸಿ ಮುತ್ಯಾಲಮ್ಮ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement