ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಹಾಲ್ಕುರಿಕೆ ಗ್ರಾಪಂ ಆವರಣದಲ್ಲಿ ಗ್ರಾಮಸಭೆ ಉದ್ಘಾಟನೆ

Mainashree
Updated On : 13 Jul 2013, 11:06 am

ಕ.ಪ್ರ. ವಾರ್ತೆ  ತಿಪಟೂರು  ಜು.13
ತಾಲೂಕಿನ ಹೊನ್ನವಳ್ಳಿ ಹೋಬಳಿ ಹಾಲ್ಕುರಿಕೆ ಗ್ರಾಮ ಪಂಚಾಯಿತಿ  ಆವರಣದಲ್ಲಿ ಗ್ರಾಮಸಭೆಯನ್ನು ಗ್ರಾ.ಪಂ.ಅಧ್ಯಕ್ಷರಾದ ಜಿ.ಎಂ.ಚಿಕ್ಕಮಲ್ಲಯ್ಯ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪಶು ವೈದ್ಯ ಇಲಾಖೆಯ ವತಿಯಿಂದ ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿರುವ ಗ್ರಾಮಗಳಲ್ಲಿ ನೀರಾವರಿ ಸೌಲಭ್ಯವುಳ್ಳ ರೈತರಿಗೆ ಮೇವಿನ ಬೀಜದ ಬ್ಯಾಗುಗಳನ್ನು ಪಶು ವೈದ್ಯಾಧಿಕಾರಿ ಡಾ. ಶಶಿಧರ್  ವಿತರಿಸಿದರು.  ಗ್ರಾ.ಪಂ.ವ್ಯಾಪ್ತಿಯ ಸುತ್ತಮುತ್ತಲ ಗ್ರಾಮಸ್ಥರು ಮನೆಗ್ರ್ಯಾಂಟ್, ಶೌಚಾಲಯ, ಭಾಗ್ಯಜ್ಯೋತಿ ಪಡೆಯಲು ಅರ್ಜಿಗಳನ್ನು ಸಲ್ಲಿಸಿದರು.
ಸಭೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ವಿಮಲ, ಸದಸ್ಯರಾದ ತಿಮ್ಮನಾಯ್ಕ, ಉಮಾಮಹೇಶ್, ಬಸವರಾಜ್, ಸಹಾಯಕ ನಿರ್ದೇಶಕ ಮಹಾಂತೇಶ್, ಇ.ಸಿ.ಸಿ.ಬಸವರಾಜ್, ಪಿಡಿಓ ಶಿವಲಿಂಗಯ್ಯ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement