ಪ್ರಶಸ್ತಿಗೆ ಭಾಜನರಾದ ಪತ್ರಕರ್ತರು
ತುಮಕೂರು: ಪತ್ರಿಕಾ ದಿನಾಚರಣೆಯಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯ ಜಿಲ್ಲಾ ವರದಿಗಾರ ಹಿರೇಹಳ್ಳಿ ದೇವರಾಜು, ಪ್ರಜಾಪ್ರಗತಿಯ ಚಿಕ್ಕೀರಪ್ಪ, ಈನಾಡು ದಿನಪತ್ರಿಕೆಯ ಜಿಲ್ಲಾ ವರದಿಗಾರ ಗೋವಿಂದಪ್ಪ ಅವರನ್ನು ಸನ್ಮಾನಿಸಲಾಯಿತು. ಅತ್ತುತ್ತಮ ವರದಿಗಳಿಗೆ ನೀಡುವ ವಿಶೇಷ ವಾರ್ಷಿಕ ಪ್ರಶಸ್ತಿಯನ್ನು ಕೆಳಕಂಡ ಪತ್ರಕರ್ತರಿಗೆ ನೀಡಲಾಯಿತು. ದಿ. ಹೆಚ್.ಆರ್. ಗುಂಡೂರಾವ್ ಸ್ಮರಣಾರ್ಥ ಪ್ರಶಸ್ತಿಯನ್ನು ಕ್ರಾಂತಿಪ್ರಭಾ ದಿನಪತ್ರಿಕೆಯ ವಾಜಿದ್‌ಖಾನ್ ತೋವಿನ, ಶ್ರೇಯಸ್ ಸಂಸ್ಥೆ ನೀಡುವ ತನಿಖಾ ವರದಿಗೆ ಪಬ್ಲಿಕ್ ಟಿವಿಯ ಟಿ. ಯೋಗೀಶ್, ದಿ. ಸಿ.ಎನ್. ಭಾಸ್ಕರಪ್ಪ ಸ್ಮರಣಾರ್ಥ ನೀಡುವ ಪರಿಸರ ವರದಿಗೆ ಉದಯವಾಣಿ ಪತ್ರಿಕೆಯ ಗುರುಮೂರ್ತಿ ಕೊಟ್ಟಿಗೆ ಮನೆ, ಜಿಲ್ಲಾ ಸಂಘ ನೀಡುವ ವಿಶೇಷ ಸಾಹಸಮಯ ಛಾಯಾಚಿತ್ರ ಪ್ರಶಸ್ತಿಗೆ ಛಾಯಾಗ್ರಾಹಕ ಜೆಪಿ (ಜಯಪ್ರಕಾಶ್) ಭಾಜನರಾಗಿದ್ದಾರೆ).