ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಾನವನ ಮೊದಲ ಶತ್ರು ಮದ್ಯಪಾನ

Mainashree
Updated On : 13 Jul 2013, 11:05 am

ಕನ್ನಡಪ್ರಭವಾರ್ತೆ  ಕುಣಿಗಲ್  ಜು. 13
ಮಾನವನ ಮೊದಲ ಶತ್ರು ಮದ್ಯಪಾನ, ಮದ್ಯಪಾನದಿಂದ ಮುಕ್ತರಾದಾಗ ಮಾತ್ರ ನವಜೀವನ ನಿರ್ಮಾಣ ಸಾಧ್ಯ ಎಂದು ಬೆಟ್ಟಹಳ್ಳಿಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
 ಶನಿವಾರ, ಪಟ್ಟಣದ ಕೊಲ್ಲಾಪುರದಮ್ಮ ಕಲ್ಯಾಣ ಮಂಟದಲ್ಲಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿವಿಧ ಸಂಘ ಸಂಸ್ಥೆಗಳು ಸಹಕಾರದೊಂದಿಗೆ ಹಮ್ಮಿಕೊಳ್ಳಲಾದ ಕಳೆದ ಏಳುದಿನಗಳಿಂದ ನಡೆಯುತ್ತಿದ್ದ ಮದ್ಯವರ್ಜನ ಶಿಬಿರ ಸಮಾರೋಪ ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
 ಕೆಲವೊಂದು ಆಕಸ್ಮಿಕ ಸಂದರ್ಭದ ಪರಿಸ್ಥಿತಿಯ ಕೆಟ್ಟ ಗಳಿಗೆ ಒಳಗಾಗಿ ಮದ್ಯವ್ಯಸನಿಗಳಾಗುತ್ತಾ, ತಾವು ತೊಂದರೆ ಅನುಭವಿಸುತ್ತಾ, ಅವರನ್ನು ಅವಲಂಬಿಸಿದವರಿಗೂ ತೊಂದರೆ ನೀಡಿ ಹಲವು ತರಹದ ಸಮಸ್ಯೆ ಸೃಷ್ಟಿಸುತ್ತಾ, ಸಾಮಾಜಿಕ ಸಮಸ್ಯೆಯಾಗುವ ಮಟ್ಟಕ್ಕೆ ಸಮಾಜದಲ್ಲಿ ಯಾರಿಗೂ ಬೇಡವಾಗುವಂತಹ ವಾತಾವರಣಕ್ಕೆ ಕಾರಣಕರ್ತರಾಗುತ್ತಿದ್ದು, ಬದಲಾವಣೆ ಪ್ರಕೃತಿಯ ನಿಯಮ. ನಮ್ಮನ್ನು ಸೃಷ್ಟಿಸಿದ ಪ್ರಕೃತಿಯೇ ಸದಾ ಬದಲಾವಣೆಯ ತುಡಿತದಲ್ಲಿರುವಾಗ, ಮದ್ಯವ್ಯಸನಿಗಳು ಪ್ರಕೃತಿಯನ್ನು ನೋಡಿ ತಾವು ಬದಲಾಗಿ, ಸಮಾಜಕ್ಕೆ, ಕುಟುಂಬಕ್ಕೆ ಹೊರೆಯಾಗದಂತೆ ಜೀವನ ನಡೆಸಬೇಕೆಂದರು.
ಮುಕ್ತ ಗೊಳಿಸಿದ್ದಾರೆ: ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡು, ಮದ್ಯವ್ಯಸನದಿಂದ ಮುಕ್ತಗೊಂಡ ಶಿಬಿರಾರ್ಥಿ ಧನಂಜಯ, ಯಾವುದೇ ದೈಹಿಕ ಹಲ್ಲೆ ನಡೆಸದೆ, ಮಾನಸಿಕ ಪರಿವರ್ತನೆ ರೂಪಿಸುವ ಮೂಲಕ ನಮ್ಮನ್ನು ಮಾನಸಿಕವಾಗಿ, ದೈಹಿಕವಾಗಿ ಚಟದಿಂದ ಮುಕ್ತಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ಆತ್ಮೀಯವಾಗಿ ಕಲೆತು ಸುಂದರ ಬದುಕಿನ ಕನಸನ್ನು ಸಾಕಾರಗೊಳಿಸುವುದಾಗಿ ತಿಳಿಸಿ, ಶಿಬಿರವನ್ನು ಆಯೋಜಿಸಿದ ಎಲ್ಲರಿಗೂ ನಮನ ಸಲ್ಲಿಸಿದರು.
ಪಟ್ಟಣದ ಇತಿಹಾಸದಲ್ಲೆ ಮೊದಲಬಾರಿಗೆ ನಡೆದ ಮದ್ಯವರ್ಜನ ಶಿಬಿರದಲ್ಲಿ 105 ಮದ್ಯವ್ಯಸನಿಗಳು ಪಾಲ್ಗೊಂಡಿದ್ದು, ಸತತ ಏಳು ದಿನಗಳ ಕಾಲ ನಡೆದ ಶಿಬಿರದಿಂದ 106 ಮಂದಿ ಮದ್ಯವ್ಯಸನದಿಂದ ಮುಕ್ತಗೊಂಡಿದ್ದರು. ಅಂತಿಮ ದಿನವಾದ ಶನಿವಾರದಂದು ಶಿಬಿರದಲ್ಲಿ ತಮ್ಮವರು ಮದ್ಯವ್ಯಸನದಿಂದ ಮುಕ್ತರಾಗಿರುವುದನ್ನು ಕಂಡ ಕುಟುಂಬದ ಸದಸ್ಯರ ಆನಂದಕ್ಕೆ ಪಾರವೇ ಇಲ್ಲದಂತಾಗಿದ್ದು ವಿಶೇಷವಾಗಿತ್ತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಹರಿ, ಜಿಲ್ಲಾ ನಿರ್ದೇಶಕ ಗಂಗಾಧರ ರೈ, ತಾಲೂಕು ಯೋಜನಾದಿಕಾರಿ ಶಶಿರೇಖಾ, ಶಿಬಿರ ಸಮಿತಿ ವ್ಯವಸ್ಥಾಪಕ ಕೆ.ಎಲ್.ಹರೀಶ್, ಗೌರವಾಧ್ಯಕ್ಷೆ ಬಿ.ಟಿ.ನಾಗರತ್ನಮ್ಮ, ಶಿಬಿರಾಧಿಕಾರಿ ವಿನ್ಸೆಂಟ್ ವಿವೇಕ ಪಾಯಸ್, ಭಾಸ್ಕರ್, ಕಸಾಪ ಅಧ್ಯಕ್ಷ ದಿನೇಶ್, ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement