ದಲಿತ ಕಾಲೋನಿಗಳ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲು ಸಭೆಗೆ ಆಗ್ರಹ
ತುಮಕೂರು: ತುಮಕೂರು ನಗರ ದಲಿತ ಕಾಲೋನಿಗಳ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲು ತುಮಕೂರು ನಗರದ ಕೌನ್ಸಿಲರ್ ಮತ್ತು ಎಸ್.ಸಿ., ಎಸ್‌ಟಿ ಸಂಘಟನೆ ಮುಖಂಡರ ಸಭೆ ಕರೆಯುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್. ರಾಮಯ್ಯ ನೇತೃತ್ವದ ನಿಯೋಗ ನಗರಸಭೆ ಆಯುಕ್ತರಿಗೆ ಮನವಿ ಅರ್ಪಿಸಿದರು. ನಗರಸಭೆ ಮುಂದೆ ಇರುವ 3 ಪಾರ್ಕ್‌ಗಳ ಅಭಿವೃದ್ಧಿಪಡಿಸಿ ಸಾರ್ವಜನಿಕರಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿದರು. ಎಸ್‌ಸಿ, ಎಸ್‌ಟಿ ಜನಾಂಗಕ್ಕೆ ಮೀಸಲಿಟ್ಟ 22.75 ಲಕ್ಷ ಹಣವನ್ನು ಸಮಯಕ್ಕೆ ಸರಿಯಾಗಿ ಖರ್ಚು ಮಾಡಬೇಕು. ಜಿಲ್ಲಾಧಿಕಾರಿ ಕಚೇರಿ ಮುಂದೆ ಡಾ. ಬಿ.ಆರ್. ಅಂಬೇಡ್ಕರ್ ರಸ್ತೆ ಎಂಬ ನಾಮಫಲಕ ಹಾಕುವಂತೆ ಮನವಿ ಮಾಡಿದರು. 1ರಿಂದ 5ನೇ ತರಗತಿಯವರೆಗೆ ಇಂಗ್ಲಿಷ್ ಮತ್ತು ಕನ್ನಡ ಪ್ರತಿಷ್ಠಿತ ಶಾಲೆಗಳಿಗೆ ದಾಖಲಿಸುವುದಕ್ಕೆ ರಿನೀವಲ್ 10 ಲಕ್ಷ ಹಣ ಮೀಸಲಿಡಬೇಕೆಂದು ಆಗ್ರಹಿಸಿದರು.