ಬಯೋ ಮೆಟ್ರಿಕ್ ನೀಡದವರಿಗೆ ಆಹಾರಧಾನ್ಯವಿಲ್ಲ
ಪಾವಗಡ: ಬಯೋ ಮೆಟ್ರಿಕ್ ನೀಡದೇ ಇರುವ ತಾಲೂಕಿನ ಪಡಿತರರಿಗೆ ಪ್ರಸಕ್ತ ಸಾಲಿನ ಜುಲೈ ಮಾಹೆಯಿಂದ ಪಡಿತರ ಆಹಾರ ಧಾನ್ಯಗಳು ವಿತರಣೆ ಆಗುವುದಿಲ್ಲವೆಂದು ತಹಸೀಲ್ದಾರ್ ಮಹಮ್ಮದ್ ಆಲ್ತಾಪ್ ಪಾಷ ತಿಳಿಸಿದ್ದಾರೆ. ಅವರು ಸೋಮವಾರ ಸುದ್ದಿಗಾರರಂದಿಗೆ ಮಾತನಾಡಿ ಬಯೋ ಮೆಟ್ರಿಕ್ ನೀಡದೇ ಇರುವ ಪಡಿತರ ಚೀಟಿದಾರರಿಗೆ ಪ್ರಸಕ್ತ ಸಾಲಿನ ಜುಲೈ ಮಾಹೆಯಿಂದ ಪಡಿತರ ಆಹಾರ ಪದಾರ್ಥಗಳು ವಿತರಣೆ ಇರುವುದಿಲ್ಲ.ಈಗಾಗಲೇ ಬೆರಳಚ್ಚು ಬಯೋ ಮೆಟ್ರಿಕ್ ನೀಡದೇ ಇರುವ ಪಡಿತರ ಚೀಟಿದಾರರ ಪಟ್ಟಿಯನ್ನು ತಾಲೂಕಿನ ಎಲ್ಲಾ ನ್ಯಾಯ ಬೆಲೆ ಅಂಗಡಿ ಮಾಲೀಕರು ಹಾಗೂ ಎಲ್ಲಾ ಗ್ರಾಪಂಗಳಿಗೆ ನೀಡಿರುವುದಾಗಿ ಅವರು ತಿಳಿಸಿದರು. ಬಯೋವುಟ್ರಿಕ್ ನೀಡಲು ಪಡಿತರರಿಗೆ ಇನ್ನೂ ಅವಕಾಶ ಕಲ್ಪಿಸಿದ್ದು ಬಯೋವುಟ್ರಿಕ್ ನೀಡದೇ ಇರುವ ಪಡಿತರರು ಗ್ರಾಮೀಣಾ ಪ್ರದೇಶ ವ್ಯಾಪ್ತಿಯ ಪಡಿತರ ಚೀಟಿದಾರರು ನಿಮ್ಮ ವ್ಯಾಪ್ತಿಯ ಗ್ರಾಮ ಪಂಚಾತಿಯಿಗಳಲ್ಲಿ ಹಾಗೂ ಪಟ್ಟಣ ಪ್ರದೇಶದ ಪಡಿತರ ಚೀಟಿದಾರರು ತಾಲೂಕು ಕಚೇರಿಗೆ ಭೇಟಿ ನೀಡಿ ಬಯೋವುಟ್ರಿಕ್ ನೀಡಲು ಅವರು ಸೂಚಿಸಿ, ಆದೇಶ ಉಲ್ಲಂಘಿಸಿದ್ದಲ್ಲಿ ಪಡಿತರ ಚೀಟಿಗಳು ರದ್ದಾಗುವ ಸಂಭವವಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಯವರು ಬಡ ಪಡಿತರರಿಗೆ ಮೊದಲ ಅದ್ಯತೆ ನೀಡಿ ಬೆರಳಚ್ಚು ಪಡಿತರರಿಂದ ಬಯೋ ಮೆಟ್ರಿಕ್ ಪಡೆಯಲು ಆದೇಶಿಸಿದ್ದಾರೆ. ಇದೇ ಸಂದರ್ಭದಲ್ಲಿ ಆಹಾರ ಇಲಾಖೆಯ ಶಿರಸ್ತೇದಾರ್ ನಾರಾಯಣಪ್ಪ ಹಾಗೂ ಇಲಾಖೆಯ ಎಫ್ಡಿಸಿ ಮಂಜುನಾಥ್ ಇದ್ದರು.
ಜೀವನದ ಪರೀಕ್ಷೆಗೂ ವಿದ್ಯಾರ್ಥಿಗಳನ್ನು ಅಣಿ ಮಾಡಲಿ
ತುಮಕೂರು: ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅಣಿ ಮಾಡುವುದರ ಜತೆಯಲ್ಲಿ ಜೀವನದ ಪರೀಕ್ಷೆಗೂ ಅಣಿ ಮಾಡಬೇಕು ಎಂದು ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಕಾರ್ಯದರ್ಶಿ ಜ್ಯೋತಿ ಗಣೇಶ್ ಅಭಿಪ್ರಾಯಪಟ್ಟರು. ಅವರು ಗುಬ್ಬಿಯ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ 15 ದಿವಸಗಳ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಪ್ರಾಯೋಜಿತ ಡಿಜಿಟಲ್ ಸಿಗ್ನಲ್ ಪ್ರೊಸೆಸಿಂಗ್ ಬೋಧನಾಂಗ ಅಭಿವೃದ್ಧಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ವಿಶ್ವವಿದ್ಯಾಲಯಗಳು ಕೇವಲ ಪಾಠಗಳಿಗಷ್ಟೇ ಪ್ರಾಮುಖ್ಯ ನೀಡದೆ ಬದುಕಿನ ಎಲ್ಲಾ ಸ್ತರಗಳಲ್ಲೂ ವಿದ್ಯಾರ್ಥಿಗಳನ್ನು ರೂಪಿಸಬೇಕಾದ ಅಗತ್ಯತೆ ಇದೆ ಎಂದರು. ಸಿಐಟಿ ನಿರ್ದೇಶಕ ಡಾ. ಡಿ.ಎಸ್. ಸುರೇಶ್ ಕುಮಾರ್ ಅವರು ಈ ಬೋಧನಾಂಗ ಅಭಿವೃದ್ಧಿ ಶಿಬಿರದಿಂದ ಶಿಬಿರಾರ್ಥಿಗಳು ಪಡೆಯುವ ಪ್ರಯೋಜನಗಳನ್ನು ವಿವರಿಸಿ ಜ್ಞಾನ ಈ ಜಗತ್ತನ್ನು ಆಳಲಿದೆ ಎಂದು ತಿಳಿಸಿದರು.