ವಿವಿಧ ಗ್ರಾ.ಪಂ.ಸದಸ್ಯ ಸ್ಥಾನಗಳಿಗೆ ಉಪಚುನಾವಣೆ
ಕ.ಪ್ರ. ವಾರ್ತೆ ತುಮಕೂರು ಜು.15
ರಾಜ್ಯ ಚುನಾವಣಾ ಆಯೋಗದ ಆದೇಶದನ್ವಯ ತುಮಕೂರು ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮಪಂಚಾಯತಿ ಸದಸ್ಯ ಸ್ಥಾನಗಳಿಗೆ ಉಪಚುನಾವಣೆಯನ್ನು ನಡೆಸಲು ಕರ್ನಾಟಕ ಪಂಚಾಯತ್ ರಾಜ್ ನಿಯಮಗಳು 1993ರ ನಿಯಮ 12 ರನ್ವಯ ಈ ಕೆಳಕಂಡಂತೆ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಚುನಾವಣಾ ನೀತಿ ಸಂಹಿತೆಯು ಗ್ರಾ.ಪಂಚಾಯತಿಯ ಚುನಾವಣೆ ನಡೆಯುವ ಕ್ಷೇತ್ರದ ವ್ಯಾಪ್ತಿಯಲ್ಲಿ ಮಾತ್ರ ಜುಲೈ 17 ರಿಂದ ಆಗಸ್ಟ್ 7 ರವರೆಗೆ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ತಿಳಿಸಿದ್ದಾರೆ. 24, ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ, 25 ರಂದು ನಾಮಪತ್ರ ಪರಿಶೀಲಿಸುವ ದಿನ. 27 ರಂದು ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆಯ ದಿನ. ಆಗಸ್ಟ್ 4 ರಂದು ಮತದಾನ ಅವಶ್ಯವಿದ್ದರೆ ಮತದಾನ ನಡೆಸಬೇಕಾದ ದಿನ, ಮತದಾನದ ಸಮಯ ಬೆ. 7 ರಿಂದ ಸಂಜೆ 5 ಗಂಟೆಯವರೆಗೆ.
ತುಮಕೂರು ತಾಲೂಕು ನಿಡುವಳಲು ಗ್ರಾಮಪಂಚಾಯತಿಯ ನಾರಾಯಣಕೆರೆ ಕ್ಷೇತ್ರದ ಒಂದು ಸ್ಥಾನ (ಸಾಮಾನ್ಯ), ಮೈದಾಳ ಗ್ರಾ.ಪಂ. ಸಿದ್ದಗಂಗಾಮಠ ಕ್ಷೇತ್ರದ ಒಂದು ಸ್ಥಾನ (ಪ.ಜಾತಿ), ಸೀತಕಲ್ಲು ಗ್ರಾ.ಪಂ. ಹಿರೇದೊಡ್ಡವಾಡಿ ಕ್ಷೇತ್ರದ ಒಂದು ಸ್ಥಾನ (ಪ.ಜಾತಿ), ಹರಳೂರು ಗ್ರಾ.ಪಂ. ಕೌತಮಾರನಹಳ್ಳಿ ಕ್ಷೇತ್ರದ ಒಂದು ಸ್ಥಾನ (ಪ.ಜಾತಿ), ಗೂಳೂರು ಗ್ರಾ.ಪಂ. ಗೂಳೂರು-2 ಕ್ಷೇತ್ರದ ಒಂದು ಸ್ಥಾನ (ಪ.ಜಾತಿ) ಗಳಿಗೆ ಚುನಾವಣೆ ನಡೆಯಲಿದೆ.
ಗುಬ್ಬಿ ತಾಲೂಕಿನ ಅಡಗೂರು ಗ್ರಾ.ಪಂ. ಗುಬ್ಬಿ ಅಮಾನಿಕೆರೆ ಕ್ಷೇತ್ರದ ಒಂದು ಸ್ಥಾನ (ಪ.ಪಂಗಡ ಮಹಿಳೆ), ಇರಕಸಂದ್ರ ಗ್ರಾ.ಪಂ. ಕಗ್ಗೆರೆ ಕ್ಷೇತ್ರದ ಒಂದು (ಪ.ಜಾತಿ), ಬಿದರೆ ಗ್ರಾ.ಪಂ. ಗೌರಿಪುರ-2 ಕ್ಷೇತ್ರದ ಒಂದು ಸ್ಥಾನ (ಪ.ಜಾತಿ) ಗಳಿಗೆ ಚುನಾವಣೆ ನಡೆಯಲಿದೆ. ಕುಣಿಗಲ್ ತಾಲೂಕಿನ ತಾವರೆಕೆರೆ ಗ್ರಾ.ಪಂ. ಆರ್. ಬ್ಯಾಡರಹಳ್ಳಿ ಕ್ಷೇತ್ರದ ಒಂದು ಸ್ಥಾನ (ಸಾಮಾನ್ಯ), ಬಾಗೇನಹಳ್ಳಿ ಗ್ರಾ.ಪಂ. ಶೆಟ್ಟಿಗೆರೆ ಕ್ಷೇತ್ರದ ಒಂದು ಸ್ಥಾನ (ಸಾಮಾನ್ಯ), ಉಜ್ಜನಿ ಗ್ರಾ.ಪಂ. ದೇವಸಂದ್ರ ಕ್ಷೇತ್ರದ ಒಂದು ಸ್ಥಾನ (ಸಾಮಾನ್ಯ), ಜಿನ್ನಾಗರ ಗ್ರಾ.ಪಂ. ಬೆಳ್ಳಿಗೆರೆ ಕ್ಷೇತ್ರದ ಒಂದು ಸ್ಥಾನ (ಸಾಮಾನ್ಯ) ಗಳಿಗೆ ಚುನಾವಣೆ ನಡೆಯಲಿದೆ.
ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾ.ಪಂ. ಚಿಲುಗೊಂಡನ ಹಳ್ಳಿ ಕ್ಷೇತ್ರದ ಒಂದು ಸ್ಥಾನ (ಹಿಂದುಳಿದ ವರ್ಗ-ಅ). ತಿಪಟೂರು ತಾಲೂಕಿನ ಗುಡಿಗೊಂಡನಹಳ್ಳಿ ಗ್ರಾ.ಪಂ. ಗುಡಿಗೊಂಡನಹಳ್ಳಿ ಕ್ಷೇತ್ರದ ಒಂದು ಸ್ಥಾನ (ಸಾಮಾನ್ಯ).
ಚಿ.ನಾ.ಹಳ್ಳಿ ತಾಲೂಕಿನ ತೀರ್ಥಪುರ ಗ್ರಾಮಪಂಚಾಯತಿಯ ಚಿಕ್ಕರಾಂಪುರ ಕ್ಷೇತ್ರದ ಒಂದು ಸ್ಥಾನ (ಪ.ಪಂಗಡ ಮಹಿಳೆ). ತೀರ್ಥಪುರ ಗ್ರಾ.ಪಂ. ದೊಡ್ಡರಾಂಪುರ ಕ್ಷೇತ್ರದ ಒಂದು ಸ್ಥಾನ (ಪ.ಪಂಗಡ), ದೊಡ್ಡ ಎಣ್ಣೆಗೆರೆ ಗ್ರಾ.ಪಂ. ಚಿಕ್ಕಎಣ್ಣೆಗೆರೆ ಕ್ಷೇತ್ರದ ಒಂದು ಸ್ಥಾನ (ಪ.ಪಂಗಡ ಮಹಿಳೆ), ಕುಪ್ಪೂರು ಗ್ರಾ.ಪಂ. ಬೆನಕನಕಟ್ಟೆ ಕ್ಷೇತ್ರದ ಒಂದು ಸ್ಥಾನ (ಹಿಂದುಳಿದ ವರ್ಗ-ಅ), ದಸೂಡಿ ಗ್ರಾ.ಪಂ. ದಸೂಡಿ-1 ಕ್ಷೇತ್ರದ ಒಂದು ಸ್ಥಾನ (ಪ.ಜಾತಿ), ತಿಮ್ಮನಹಳ್ಳಿ ಗ್ರಾ.ಪಂ. ತಿಮ್ಮನಹಳ್ಳಿ-2 ಕ್ಷೇತ್ರದ ಒಂದು ಸ್ಥಾನ (ಸಾಮಾನ್ಯ), ತಿಮ್ಮನಹಳ್ಳಿ ಗ್ರಾ.ಪಂ. ತಿಮ್ಮನಹಳ್ಳಿ-5 ಕ್ಷೇತ್ರದ ಒಂದು ಸ್ಥಾನ (ಪ.ಜಾತಿ ಮಹಿಳೆ).
ತುರುವೇಕೆರೆ ತಾಲೂಕಿನ ಕೊಡಿಗೀಹಳ್ಳಿ ಗ್ರಾ.ಪಂ. ಟಿ.ಹೊಸಹಳ್ಳಿ ಕ್ಷೇತ್ರದ ಒಂದು ಸ್ಥಾನ (ಪ.ಜಾತಿ). ಹುಲ್ಲೇಕೆರೆ ಗ್ರಾ.ಪಂ. ಕೆ.ಕೊಪ್ಪ ಕ್ಷೇತ್ರದ ಒಂದು ಸ್ಥಾನ (ಪ.ಜಾತಿ). ಆನೆಕೆರೆ ಗ್ರಾ.ಪಂ. ಬುವನಹಳ್ಳಿಯ ಕ್ಷೇತ್ರದ ಒಂದು ಸ್ಥಾನ ಹಿಂದುಳಿದ ವರ್ಗ-ಅ). ಆನೆಕೆರೆ ಗ್ರಾ.ಪಂ. ಬುವನಹಳ್ಳಿಯ ಕ್ಷೇತ್ರದ ಒಂದು ಸ್ಥಾನ (ಸಾಮಾನ್ಯ ಮಹಿಳೆ). ಬೈತರಹೊಸಹಳ್ಳಿ ಗ್ರಾ.ಪಂ. ಬೈತರ ಹೊಸಹಳ್ಳಿ ಕ್ಷೇತ್ರದ ಒಂದು ಸ್ಥಾನ (ಅನುಸೂಚಿತ ಪಂಗಡ ಮಹಿಳೆ). ಶಿರಾ ತಾಲೂಕಿನ ದೊಡ್ಡಅಗ್ರಹಾರ ಗ್ರಾ.ಪಂ. ದೊಡ್ಡ ಅಗ್ರಹಾರ ಕ್ಷೇತ್ರದ ಒಂದು ಸ್ಥಾನ (ಪ.ಜಾತಿ). ನಾದೂರು ಗ್ರಾ.ಪಂ. ಸೀಗಲಹಳ್ಳಿಯ ಕ್ಷೇತ್ರದ ಒಂದು ಸ್ಥಾನ (ಹಿಂದುಳಿದ ವರ್ಗ-ಅ). ದೊಡ್ಡಬಾಣಗೆರೆ ಗ್ರಾ.ಪಂ. ಕುರುಬರ ರಾಮನಹಳ್ಳಿ ಕ್ಷೇತ್ರದ ಒಂದು ಸ್ಥಾನ (ಸಾಮಾನ್ಯ). ಬುಕ್ಕಾಪಟ್ಟಣ ಗ್ರಾ.ಪಂ. ಬುಕ್ಕಾಪಟ್ಟಣ-4 ಕ್ಷೇತ್ರದ ಒಂದು ಸ್ಥಾನ (ಹಿಂದುಳಿದ ವರ್ಗ-ಅ ಮಹಿಳೆ).
ಪಾವಗಡ ತಾಲೂಕಿನ ಪೊನ್ನಸಮುದ್ರ ಗ್ರಾ.ಪಂ. ಗಂಗಸಾಗರ ಕ್ಷೇತ್ರದ ಒಂದು ಸ್ಥಾನ (ಹಿಂದುಳಿದ ವರ್ಗ-ಅ). ತಿರುಮಣಿ ಗ್ರಾ.ಪಂ. ಆರ್. ಅಚ್ಚಮ್ಮನಹಳ್ಳಿ ಕ್ಷೇತ್ರದ ಒಂದು ಸ್ಥಾನ (ಸಾಮಾನ್ಯ ಮಹಿಳೆ), ತಿರುಮಣಿ ಗ್ರಾ.ಪಂ. ರಾಯಚರ್ಲು ಕ್ಷೇತ್ರದ ಒಂದು ಸ್ಥಾನ (ಪ.ಪಂಗಡ), ತಿರುಮಣಿ ಗ್ರಾ.ಪಂ. ತಿರುಮಣಿ-2 ಕ್ಷೇತ್ರದ ಒಂದು ಸ್ಥಾನ (ಪ.ಪಂಗಡ ಮಹಿಳೆ), ಸಾಸಲಕುಂಟೆ ಗ್ರಾ.ಪಂ. ಕೆಂಚಮ್ಮನಹಳ್ಳಿ ಕ್ಷೇತ್ರದ ಒಂದು ಸ್ಥಾನ (ಪ.ಪಂಗಡ), ಸಿದ್ದಾಪುರ ಗ್ರಾ.ಪಂ. ಸಿದ್ದಾಪುರ ಕ್ಷೇತ್ರದ ಒಂದು ಸ್ಥಾನ (ಸಾಮಾನ್ಯ), ಚನ್ನಕೇಶವಪುರ ಗ್ರಾ.ಪಂ. ಚೆನ್ನಕೇಶವಪುರ ಕ್ಷೇತ್ರದ ಒಂದು ಸ್ಥಾನ (ಪ.ಜಾತಿ).