ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಆರ್ಟಿಸಾನ್ ಕ್ಲಸ್ಟರ್ ಫೆಡರೇಷನ್ ಸ್ಥಾಪಿಸಲು ನಿರ್ಧಾರ

Rashmi Kasaragodu
Updated On : 17 Jul 2013, 12:16 pm

ಕ.ಪ್ರ.ವಾರ್ತೆ   ತುಮಕೂರು   ಜು.16
ಜಿಲ್ಲೆಯಲ್ಲಿ ಉದ್ದೇಶಿತ ಆರ್ಟಿಸಾನ್ ಹಬ್, ಕ್ಲಸ್ಟರ್ ಹಬ್ ರೀಸರ್ಚ್ ಹಬ್ ಸ್ಥಾಪಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಯಮಾವಳಿ ಪ್ರಕಾರ ಉತ್ಪನ್ನವಾರು ಸ್ಪೆಷಲ್ ಪರ್ಪಸ್ ವೆಹಿಕಲ್ ರಚಿಸಿಕೊಂಡು ನೋಂದಾಯಿತ ಎಸ್.ಪಿ.ವಿ ಗಳು ಸೇರಿ ಆರ್ಟಿಸಾನ್ ಕ್ಲಸ್ಟರ್ ಫೆಡರೇಷನ್ ಸ್ಥಾಪಿಸಲು ನಿರ್ಧಾರ ಕೈಗೊಳ್ಳಲಾಯಿತು.
ನಗರದ ಭಾರದ್ವಾಜ್ ಟವರ್ಸನಲ್ಲಿ ಜಿಲ್ಲೆಯ ನಾನಾ ಸಂಘಟನೆಗಳ ನೇತೃತ್ವದಲ್ಲಿ ನಡೆದ ಆರ್ಟಿಸಾನ್ ಸಮಾಲೋಚನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸುವ ಸಮಿತಿಗೆ ಸಂಪೂರ್ಣವಾಗಿ ಸಹಕರಿಸಲು, ಜಿಲ್ಲೆಯ ಎಲ್ಲಾ 11 ವಿಧಾನಸಭಾ ಕ್ಷೇತ್ರವಾರು ಶಾಸಕರ ಅಧ್ಯಕ್ಷತೆಯಲ್ಲಿ ಉದ್ಯಮಿಯಾಗು-ಉದ್ಯೋಗ ನೀಡು ಜನಜಾಗೃತಿ ಆಂದೋಲನ ಹಮ್ಮಿಕೊಳಲು ನಿರ್ಧರಿಸಲಾಯಿತು.
ಚಿಂತನೆ: ಸಭೆಯನ್ನು ಉದ್ಘಾಟಿಸಿ ಮಾತನಾಡಿದ ತುಮಕೂರು ಸಂಸದ ಜಿ.ಎಸ್. ಬಸವರಾಜು ರಾಜ್ಯ ಸರ್ಕಾರ ಆರ್ಟಿಸಾನ್ ಹಬ್ ಸ್ಥಾಪನೆ ಕುರಿತು ಫೀಸಿಬಲಿಟಿ ರಿಫೋರ್ಟ್ ಸಿದ್ಧಪಡಿಸಲು ಚಿಂತನೆ ನಡೆಸುತ್ತಿದೆ. ಜಿಲ್ಲಾದ್ಯಂತ ಉತ್ಪನ್ನವಾರು ಕ್ಲಸ್ಟರ್ಗಳನ್ನು ಸ್ಥಾಪಿಸಲು ಎಸ್.ಪಿ.ವಿ ಗಳನ್ನು ರಚಿಸಿಕೊಂಡು ಅಗತ್ಯವಿರುವ ಮೂಲ ಸೌಕರ್ಯಕ್ಕಾಗಿ ಪ್ರಸ್ತಾವನೆ ಸಲ್ಲಿಸಲು ಕರೆ ನೀಡಿದರು.
ಪ್ರತಿಯೊಂದು ಉತ್ಪನ್ನಗಳ ಸಂಶೋಧನೆ, ಮೌಲ್ಯವರ್ಧಿತ ಬೆಲೆ, ವೈಜ್ಞಾನಿಕ ಬೆಲೆ, ತರಬೇತಿ, ಉತ್ಪಾದನೆ, ಮಾರುಕಟ್ಟೆ, ಪ್ರಾತ್ಯಕ್ಷಿಕೆ, ಸಾಮಾನ್ಯ ಸೌಲಭ್ಯ ಕೇಂದ್ರಗಳು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಅಧ್ಯಯನ ಪ್ರವಾಸ ಹೀಗೆ ಅಗತ್ಯವಿರುವ ಎಲ್ಲಾ ನೆರವನ್ನು ಸರ್ಕಾರಗಳಿಂದ ದೊರಕಿಸಲು ಶ್ರಮಿಸುವುದಾಗಿ ಘೋಷಿಸಿದರು.
ಕಾಂಗ್ರೆಸ್ ಬೆಂಬಲ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್. ಷಫಿ ಅಹಮ್ಮದ್ ಮಾತನಾಡಿ ಉದ್ದೇಶಿತ ಆರ್ಟಿಸಾನ್ ಹಬ್ಗೆ ಜಿಲ್ಲಾ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಲಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಯೋಜನೆಗೆ ಸಹಕರಿಸಲು ಯಾವುದೇ ಅಡ್ಡಿಯಾಗುವುದಿಲ್ಲ. ನಮ್ಮ ಜಿಲ್ಲೆಯವರೇ ಆದ ಡಾ. ಜಿ.ಪರಮೇಶ್ವರ್ ಅವರು ಕೆ.ಪಿ.ಸಿ.ಸಿ ಅಧ್ಯಕ್ಷರಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅವರು ಇದ್ದಾರೆ. ಇವರೆಲ್ಲರ ಸಹಕಾರದಿಂದ ಯೋಜನೆ ಯಶಸ್ವಿಗೆ ಅನುಕೂಲವಾಗಲಿದೆ. ಜಿ.ಎಸ್. ಬಸವರಾಜು ಅವರು ಕೇಂದ್ರ ಸರ್ಕಾರದಲ್ಲಿ ನಿಕಟ ಸಂಪರ್ಕ ಹೊಂದಿರುವದರಿಂದ ಎಲ್ಲರ ನೆರವು ಪಡೆಯಲು ಸಹಕಾರಿಯಾಗಲಿದೆ ಎಂದರು. ಅನಿವಾರ್ಯ ಕಾರಣಗಳಿಂದ ಸಭೆಗೆ ಹಾಜರಾಗದ ಜಿಲ್ಲಾ ಜೆ.ಡಿ.ಎಸ್ ಅಧ್ಯಕ್ಷರು ಹಾಗೂ ವಿಧಾನಪರಿಷತ್ ಸದಸ್ಯ ಡಾ. ಎಂ.ಆರ್. ಹುಲಿನಾಯ್ಕರ್ ಅವರು ಉದ್ದೇಶಿತ ಆರ್ಟಿಸಾನ್ ಬಗ್ಗೆ ಮುಖ್ಯ ಮಂತ್ರಿಗಳಿಗೆ ಈಗಾಗಲೇ ಮನವಿ ಸಲ್ಲಿಸಿದ್ದು ಜೆ.ಡಿ.ಎಸ್ ಪಕ್ಷ ಮತ್ತು ವೈಯಕ್ತಿಕವಾಗಿ ಯೋಜನೆ ಅನುಷ್ಠಾನಕ್ಕೆ ಸಂಪೂರ್ಣವಾಗಿ ಸಹಕರಿಸುವ ಭರವಸೆ ನೀಡಿ ಮುಂದಿನ ಸಭೆಯಲ್ಲಿ ತಪ್ಪದೇ ಭಾಗವಹಿಸುವುದಾಗಿ ತಿಳಿಸಿರುವುದನ್ನು ಸಭೆಯ ಗಮನಕ್ಕೆ ತರಲಾಯಿತು.
ಜಿಲ್ಲೆಯ ನಾನಾ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement