ಕಲಾ ಕಾಲೇಜು ಕಟ್ಟಡ ವಶಕ್ಕೆ ಆಗ್ರಹ
ತುಮಕೂರು: ಸರ್ಕಾರಿ ಕಲಾ ಕಾಲೇಜಿಗಾಗಿಯೇ ಕಟ್ಟಲಾಗಿದ್ದ ನೂತನ ಕಟ್ಟಡವನ್ನು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಥವಾ ಮಹಿಳಾ ಕಾಲೇಜು ನಡೆಸಲು ಅನುವಾಗುವಂತೆ ತುಮಕೂರು ವಿವಿಗೆ ಸರ್ಕಾರ ಆದೇಶಿಸಬೇಕು. ಸರ್ಕಾರಿ ಪದವಿ ಕಾಲೇಜಿಗೆ ಕಟ್ಟಡ, ಗ್ರಂಥಾಲಯ, ಪೀಠೋಪಕರಣ, ಪಾಠೋಪಕರಣ, ಪ್ರಯೋಗಾಲಯ, ಬೋಧನಾ, ಬೋಧಕೇತರ ಸಿಬ್ಬಂದಿಯನ್ನು ಒದಗಿಸುವಂತೆ, ಸರ್ಕಾರದ ವತಿಯಿಂದ ಕೂಡಲೇ ಮಹಿಳಾ ಪದವಿ ಕಾಲೇಜು ತೆರೆದು ಅನುಕೂಲ ಮಾಡಿಕೊಡುವಂತೆ ಸಿ. ಶಿವಮೂರ್ತಿ ಸರ್ಕಾರವನ್ನು ಆಗ್ರಹಿಸಿದರು.