ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಪ್ರೊ.ಡಿ.ಮಂಜಯ್ಯ ವರ್ಗಾವಣೆಗೆ ವಿರೋಧ: ವಿದ್ಯಾರ್ಥಿಗಳ ಪ್ರತಿಭಟನೆ

Rashmi Kasaragodu
Updated On : 17 Jul 2013, 12:16 pm

ಗುಬ್ಬಿ: ಸರ್ಕಾರಿ ಪ್ರಥಮ ದರ್ಜೆ ವಿದ್ಯಾರ್ಥಿಗಳು ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ.ಡಿ.ಮಂಜಯ್ಯ ಅವರು ವರ್ಗಾವಣೆಗೊಂಡಿರುವುದರಿಂದ ಇದೇ ಕಾಲೇಜಿನಲ್ಲೇ ಮುಂದುವರಿಸುವಂತೆ ಗುಬ್ಬಿ ತಹಸೀಲ್ದಾರ್ ಕಚೇರಿ ಮುಂದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಕಾಲೇಜು ಆವರಣದಿಂದ ಮೆರವಣಿಗೆಯ ಮೂಲಕ ಪ್ರತಿಭಟನೆ ನಡಸಿದ ವಿದ್ಯಾರ್ಥಿಗಳು ಗುಬ್ಬಿ ತಹಸೀಲ್ದಾರ್ ಕಚೇರಿ ಮುಂದೆ ಸೇರಿದರು. ಸರ್ಕಾರ ಕೇವಲ ಇಬ್ಬರು ಪ್ರಾಧ್ಯಾಪಕರನ್ನು ಮಾತ್ರ ನೇಮಿಸಿದ್ದು ಉಳಿದ ಪ್ರಾಧ್ಯಾಪಕರೆಲ್ಲರು ಅತಿಥಿ ಉಪನ್ಯಾಸಕರುಗಳಾಗಿರುತ್ತಾರೆ. ಹೀಗಿರುವ ಸನ್ನಿವೇಶದಲ್ಲಿ ವಿಭಾಗದ ಮುಖ್ಯಸ್ಥರಾದ ಪ್ರೊ.ಡಿ.ಮಂಜಯ್ಯ ಅವರನ್ನು ಬೇರೊಂದು ಕಾಲೇಜಿಗೆ ವರ್ಗಾವಣೆ ಮಾಡಿರುವುದು ಆತಂಕಕ್ಕೆ ಎಡೆಮಾಡಿದೆ ಎಂದರು.
ಈ ಕಾಲೇಜಿನಲ್ಲಿ ಉತ್ತಮ ಫಲಿತಾಂಶ ಬರುವುದಕ್ಕೆ ಈ ಪ್ರಾಧ್ಯಾಪಕರೆ ಕಾರಣ. ಕಳೆದ ಎಂಟು ವರ್ಷಗಳಿಂದ ಬರುತ್ತಿರುವ ಫಲಿತಾಂಶವೇ ಕಾರಣ.
ಈ ಉಪನ್ಯಾಸಕ ಶಿಸ್ತು, ಸಂಯಮ, ಸಮಯಪಾಲನೆಯ ಜೊತೆಗೆ ಇವರಲ್ಲಿ ಅಡಕವಾಗಿರುವ ಬೋಧನಾ ಕೌಶಲ್ಯಗಳಿಂದ ಕಾಲೇಜಿನ ವಿದ್ಯಾರ್ಥಿಗಳಲ್ಲಿಯೂ ಸಹ ಸ್ವಯ-ಶಿಸ್ತು ಮೂಡಿರುವ ವಾತಾವರಣ ಇಡೀ ಕಾಲೇಜಿನಲ್ಲಿದೆ. ಇದರ ಜೊತೆಗೆ ನಮ್ಮೆಲ್ಲರಿಗೂ ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶ ಬರುತ್ತದೆ  ಎಂಬ ಆಶಾಭಾವನೆ ಕಮರಿಹೋಗಿದ್ದು ಭವಿಷ್ಯದ ಬಗ್ಗೆ ಆತಂಕ ಉಂಟಾಗಿದೆ.
ಆದ್ದರಿಂದ ಈ ಉಪನ್ಯಾಸಕರನ್ನು ಗುಬ್ಬಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಂದುವರಿಸಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅನುಕೂಲ ಮಾಡಿಕೊಡಬೇಕೆಂದು ತಹಸೀಲ್ದಾರ್ಗೆ ಮನವಿ ಪತ್ರ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement