ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಲೆಕ್ಕ ಪತ್ರ ನೀಡದ ಪಕ್ಷೇತರರು

Rashmi Kasaragodu
Updated On : 17 Jul 2013, 12:17 pm

ತುರುವೇಕೆರೆ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರಿಬ್ಬರು ಚುನಾವಣೆಗೆ ಮಾಡಿರುವ ಖರ್ಚಿನ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿಲ್ಲ. ಅವರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿ ಎಸ್ ಪುರ ಹೋಬಳಿ ಮಲ್ಲಪ್ಪನಹಳ್ಳಿಯ ಎಂ.ಟಿ.ಕೃಷ್ಣಪ್ಪ ಹಾಗೂ ಚುನಾವಣೆಯಲ್ಲಿ ಸುಧಾರಣೆ ತರಬೇಕು. ಪ್ರಾಮಾಣಿಕ ಅಭ್ಯರ್ಥಿಗೇ ಮತ ನೀಡಿ ಎಂದು ಮನೆ ಮನೆ ಪ್ರಚಾರ ಕೈಗೊಂಡು ಸುದ್ದಿಯಾಗಿದ್ದ ಚಂದ್ರಾಪುರದ ಚೇತನ್ ರಂಗನಾಥ್ ಎಂಬುವವರೇ ಚುನಾವಣಾ ಖರ್ಚಿನ ಬಗ್ಗೆ ಮಾಹಿತಿ ನೀಡದೇ ಚುನಾವಣಾ ಆಯೋಗದ ಕಾನೂನು ಕ್ರಮಕ್ಕೆ ಈಡಾಗಿರುವವರು.   ಸ್ಥಳೀಯ ಪಟ್ಟಣ ಪಂಚಾಯ್ತಿಯಲ್ಲಿ ವಾರ್ಡ್ ನಂ 1 ರಿಂದ ಸ್ಪರ್ಧಿಸಿದ್ದ ಅರುಣ್ ಕುಮಾರ್, 2 ನೇ ವಾರ್ಡ್ನಿಂದ ಸ್ಪರ್ಧಿಸಿದ್ದ  ಟಿ.ಮಂಜುನಾಥ್ ಹಾಗೂ ಟಿ.ಎನ್.ಬಸವರಾಜು, 9 ನೇ ವಾರ್ಡ್ ನಿಂದ ಸ್ಪರ್ಧಿಸಿದ್ದ ಎಲ್.ಮಂಜುಳಾ, 10 ನೇ ವಾರ್ಡ್ನಿಂದ ಸ್ಫರ್ಧಿಸಿದ್ದ ಎಂ.ಜೆ.ರಾಘವೇಂದ್ರ, 13 ನೇ ವಾರ್ಡ್ನಿಂದ ಸ್ಪರ್ಧಿಸಿದ್ದ ಜಿ.ಎಂ.ರಾಮಚಂದ್ರ ಮೂರ್ತಿ ಸಹ ಚುನಾವಣಾ ಖರ್ಚಿನ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿಲ್ಲ ಎಂದು ತಹಸೀಲ್ದಾರ್ ಜಿ.ಪಿ.ಮಂಜೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement