ಕಾಲಾವಕಾಶ ವಿಸ್ತರಿಸಿ ಅಂಚೆ ಅಧೀಕ್ಷಕರು ಸೂಚನೆ
ಕುಣಿಗಲ್: ತಾಲೂಕಿನ ಹುತ್ರಿ ಗ್ರಾಮದ ಗ್ರಾಮೀಣ ಅಂಚೆಪಾಲಕ ಹುದ್ದೆ ನೇಮಕಾತಿ ಪ್ರಕ್ರಿಯೆಯಲ್ಲಿ ಸಾಕಷ್ಟು ಲೋಪದೋಷಗಳು ಕಂಡು ಬಂದಿದೆ. ಗ್ರಾಮಸ್ಥರು ದೂರಿದ ಹಿನ್ನೆಲೆಯಲ್ಲಿ, ಪರಿಶೀಲನೆ ನಡೆಸಿ ಲೋಪದೋಷನಡೆದಿರುವ ಬಗ್ಗೆ ಅಂಚೆನಿರೀಕ್ಷಕರು, ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ತಾಲೂಕಿನ ಮೂರು ಕಡೆಯ ನೇಮಕಾತಿ ಪ್ರಕ್ರಿಯೆಗೆ ಜುಲೈ ತಿಂಗಳ ಅಂತ್ಯದವರೆಗೂ ಕಾಲಾವಕಾಶವನ್ನು ವಿಸ್ತರಿಸಿ ಅಂಚೆ ಅಧೀಕ್ಷಕರು ಸೂಚನೆ ನೀಡಿದ್ದಾರೆ. ಅದರಂತೆ, ಅರ್ಹ ಅಭ್ಯರ್ಥಿಗಳು, ಗ್ರಾಮೀಣ ಅಂಚೆಪಾಲಕ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕುಣಿಗಲ್ ಅಂಚೆನಿರೀಕ್ಷಕ ಚಂದ್ರನಾಯಕ್ ತಿಳಿಸಿದ್ದಾರೆ.