ಡೆಂಘೀಗೆ ಬಾಲಕ ಬಲಿ
ತುರುವೇಕೆರೆ: ತಾಲೂಕಿನ ದುಂಡ ಗ್ರಾಮದಲ್ಲಿ ಡೆಂಘೀಗೆ ಬಾಲಕನೊಬ್ಬ ಬಲಿಯಾಗಿದ್ದಾನೆ. ಗ್ರಾಮದ ಲೋಕೇಶ್ ಎಂಬುವವರ ಮಗ ದರ್ಶನ್ (10) ಎಂದು ಎಂಬುವವನೇ ಸಾವನ್ನಪ್ಪಿದ ಬಾಲಕ. ಕಳೆದ ನಾಲ್ಕೈದು ದಿನಗಳ ಹಿಂದೆ ದರ್ಶನ್ಗೆ ಜ್ವರ ಕಾಣಿಸಿಕೊಂಡಿದೆ. ಕೂಡಲೇ ದಂಡಿನಶಿವರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಆಸ್ಪತ್ರೆಗೆ ಕಳಿಸಿದ್ದಾರೆ. ಅಲ್ಲೂ ಸಹ ಚಿಕಿತ್ಸೆಗೆ ದರ್ಶನ್ ಸ್ಪಂದಿಸಲಿಲ್ಲ ಎನ್ನಲಾಗಿದೆ. ಅಂತಿಮವಾಗಿ ದರ್ಶನ್ನನ್ನು ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದರ್ಶನ್ ಮಂಗಳವಾರ ರಾತ್ರಿ ಕೊನೆಯುಸಿರೆಳೆದ. ಬಾಲಕನ ಅಂತ್ಯ ಸಂಸ್ಕಾರವನ್ನು ಬುಧವಾರ ದುಂಡ ಗ್ರಾಮದಲ್ಲಿ ನೆರವೇರಿಸಲಾಯಿತು.
ರಥೋತ್ಸವ
ತಿಪಟೂರು: ನಗರದ ಶ್ರೀ ವ್ಯಾಸರಾಯ ಪ್ರತಿಷ್ಠಾಪಿತ ಕೋಟೆ ಶ್ರೀ ಆಂಜನೇಯಸ್ವಾಮಿಯವರ ರಥೋತ್ಸವದ ಅಂಗವಾಗಿ ಗುರುವಾರದಿಂದ ಜು.20ರವರೆಗೆ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ. ಜು.18ರಂದು ಧ್ವಜಾರೋಹಣ, ಜು.19ರಂದು ಏಕಾದಶಿ ಆಚರಣೆ, ಜು.20ರಂದು ಪಂಚಾಮೃತಾಭಿಷೇಕ, ಸಹಸ್ರನಾಮಾರ್ಚನೆ. ಅಂದೇ ಬೆಳಿಗ್ಗೆ 10ಗಂಟೆಗೆ ಶ್ರೀ ಸ್ವಾಮಿಯವರ ರಥೋತ್ಸವವು ನಗರದ ರಾಜಬೀದಿಗಳಲ್ಲಿ ನಡೆಯಲಿದೆ.