ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಧ್ಯಸ್ಥಿಕೆ ಕೇಂದ್ರದಿಂದ ಹೆಚ್ಚಿನ ಲಾಭ: ನ್ಯಾ.ನಿರ್ಮಲ

Rashmi Kasaragodu
Updated On : 18 Jul 2013, 12:49 pm

ಕ.ಪ್ರ. ವಾರ್ತೆ   ಚಿಕ್ಕನಾಯಕನಹಳ್ಳಿ   ಜು.16
ಸಾರ್ವಜನಿಕರ ಅಮೂಲ್ಯ ಸಮಯ ಮತ್ತು ಅನಾವಶ್ಯಕ ಆರ್ಥಿಕ ನಷ್ಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಧ್ಯಸ್ಥಿಕೆ ಕೇಂದ್ರದ ಮೂಲಕ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳುವುದರಿಂದ ಹೆಚ್ಚಿನ ಲಾಭವಾಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ನಿರ್ಮಲ ಅವರು ನುಡಿದರು.
ಅವರು ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯದ ಆವರಣದಲ್ಲಿ ತಾಲೂಕು ವಕೀಲರ ಸಂಘ, ಜಿಲ್ಲಾ ಕಾನೂನು ಪ್ರಾಧಿಕಾರ, ತಾಲೂಕು ನೆರವು ಸಮಿತಿ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಗ್ರಾಮೀಣ ಜನರಲ್ಲಿ ಉಂಟಾಗುವ ಸಣ್ಣಪುಟ್ಟ ಸಿವಿಲ್ ವ್ಯಾಜ್ಯಗಳಿಗೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದರೆ ವರ್ಷಗಟ್ಟಲೆ ಕಾಲಾವಧಿ ಬೇಕಾಗುವುದು. ಇದರಿಂದ ಸಮಯ ಮತ್ತು ಹಣ ಎರಡೂ ವ್ಯರ್ಥವಾಗುತ್ತಿದೆ. ಆದ್ದರಿಂದ ಜನರು ಭವಿಷ್ಯದ ಬದುಕಿನ ನೆಮ್ಮದಿಗೆ ಮಧ್ಯಸ್ಥಿಕೆ ಕಾನೂನು ನೆರವಿನ ಮೂಲಕ ಬಗೆಹರಿಸಿಕೊಳ್ಳಬೇಕೆಂದರು. ಈ ನೆರವು ಕೌಟುಂಬಿಕ ವ್ಯಾಜ್ಯಗಳಿಗು ಸಹ ಅನ್ವಯಿಸಲಿದ್ದು ರಾಜಿ ಮೂಲಕ ಅವುಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಗೋಪಾಲಕೃಷ್ಣ ಅವರು ವರದಕ್ಷಿಣೆ ಪ್ರಕರಣಗಳಲ್ಲಿ ಮಹಿಳೆಯರಿಂದ ಪುರುಷರಿಗೆ ಮತ್ತು ಪುರುಷರಿಂದ ಮಹಿಳೆಯರಿಗೆ ಇಬ್ಬರು ಸಮಾನ ದುಃಖಿಗಳೇ. ಗಂಡಹೆಂಡಿರ ನಡುವೆ ನಡೆಯುವ ಕೌಟುಂಬಿಕ ಕಲಹಗಳಿಂದ ಕುಟುಂಬದ ಇತರೆ ಸದಸ್ಯರ ಮನಸ್ಥಿತಿ ಕದಡುತ್ತದೆ. ನೆಮ್ಮದಿಯಿಂದಿದ್ದ ಕುಟುಂಬಗಳು ಮಾನಸಿಕವಾಗಿ ಸಂಬಂಧಗಳು ಕಳಚಿ ವಿಭಾಗವಾಗಿ ಹೋದ ನಿದರ್ಶನಗಳಿವೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಈ ಕಾನೂನು ಸಹಾಯಕವಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ಮತ್ತೋರ್ವ ನ್ಯಾಯಾಧೀಶರಾದ ವೀಣಾ, ವಕೀಲರ ಸಂಘದ ಅಧ್ಯಕ್ಷ ಕೆ.ಸಿ. ವಿಶ್ವನಾಥ್, ಹಿರಿಯ ವಕೀಲರುಗಳಾದ ಸಿ.ಕೆ.ಸೀತಾರಾಮಯ್ಯ, ಜಿ.ಎಸ್.ಚನ್ನಬಸಪ್ಪ, ಎಚ್.ಎಸ್.ಚಂದ್ರಶೇಖರ್, ಎಂ.ಮಹಾಲಿಂಗಪ್ಪ, ಬಿ.ಕೆ.ಸದಾಶಿವು ವೈ.ಜಿ. ಲೋಕೇಶ್, ಜಿ.ಪರಮೇಶ್ವರ್ ಮುಂತಾದವರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement