ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರೋಟರಿ ವತಿಯಿಂದ ಶಾಲಾ ಪೀಠೋಪಕರಣ ವಿತರಣೆ

Rashmi Kasaragodu
Updated On : 18 Jul 2013, 12:57 pm

ತಿಪಟೂರು: ತಾಲೂಕಿನ ಮಣಕಿಕೆರೆಯ ಭುವನೇಶ್ವರಿ ಪ್ರೌಢಶಾಲೆಗೆ ತಿಪಟೂರು ರೋಟರಿ ವತಿಯಿಂದ 1 ಲಕ್ಷರು. ಮೌಲ್ಯದ ಶಾಲಾ ಪೀಠೋಪಕಣಗಳನ್ನು ನೀಡಲಾಯಿತು. ಈ ವೇಳೆ ಮಾತನಾಡಿದ ಜಿ.ಪಂ.ಸದಸ್ಯ ನಾಗರಾಜು, ಶಾಲೆಯಲ್ಲಿ ಮಕ್ಕಳಿಗೆ ಕುಳಿತುಕೊಳ್ಳಲು ಬೆಂಚ್ ಹಾಗೂ ಡೆಸ್ಕ್ಗಳಿಲ್ಲದೆ ನೆಲದ ಮೇಲೆ ಕುಳಿತು ಪಾಠ ಕೇಳುವ ಪರಿಸ್ಥಿತಿ ಇತ್ತು. ರೋಟರಿ ವತಿಯಿಂದ ಇಂತಹ ಶಾಲೆಗಳಿಗೆ ಪೀಠೋಪಕರಣಗಳನ್ನು ನೀಡುತ್ತಿರುವುದು ಸಂತಸದ ವಿಷಯ. ಹಿಂದೆ ಇದೇ ಶಾಲೆಯ ಮಕ್ಕಳಿಗೆ ರೋಟರಿಯವರು ಇಂಗ್ಲಿಷ್, ಕನ್ನಡ ನಿಘಂಟುಗಳನ್ನು ವಿತರಿಸಿದ್ದು,ಹಾಗೂ ಹಳ್ಳಿಯ ಜನರಿಗೆ ಆರೋಗ್ಯ ಶಿಬಿರಗಳನ್ನು ಆಯೋಜಿಸಿದ್ದನ್ನು ನೆನಪಿಸಿಕೊಂಡ ಅವರು ಮುಂದೆಯೂ ಸಹ ರೋಟರಿ ಸಂಸ್ಥೆ ಇಂತಹ ಸಮಾಜ ಸೇವಾ ಕಾರ್ಯಕ್ರಮಗಳನ್ನು ಹಾಕಿಕೊಂಡು ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಬೇಕೆಂದು ತಿಳಿಸಿದರು. ರೋಟರಿ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಮಾತನಾಡಿ ನಮ್ಮ ಸಂಸ್ಥೆಯ ವತಿಯಿಂದ ಇನ್ನೂ ಹಲವಾರು ಸಮಾಜ ಸೇವೆ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಹಳ್ಳಿಗಳಿಗೆ ನಾವು ಹೆಚ್ಚು ಒತ್ತು ನೀಡಿ ಕಾರ್ಯಕ್ಕಮಗಳನ್ನು ರೂಪಿಸುತ್ತೇವೆ ಎಂದರು.
ರೋಟರಿ ಅಧ್ಯಕ್ಷ ನಟರಾಜ್, ಶಾಲಾ ಕಾರ್ಯದರ್ಶಿ ಅಮರ್ಸಿಂಗ್, ರೋಟರಿಯ ಎಲ್ಲಾ ಸದಸ್ಯರಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement