21ಕ್ಕೆ ಆರ್ಟಿಸಾನ್ ಹಬ್ ಸಂವಾದ
ತುಮಕೂರು: ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಆರ್ಟಿಸಾನ್ ಹಬ್ ಬಗ್ಗೆ ಜಿಲ್ಲೆಯ 321 ಗ್ರಾಮ ಪಂಚಾಯಿತಿಗಳು ಮತ್ತು 10 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಲು ಜಿಲ್ಲೆಯ ಆಸಕ್ತ ಸ್ವಯಂಸೇವಾ ಸಂಸ್ಥೆಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಇದೇ ಜು. 21ರಂದು ಮಧ್ಯಾಹ್ನ 2.30 ಕ್ಕೆ ಜಯನಗರದ ಭಾರದ್ವಾಜ್ ಟವರ್ರ್ಸ್ 2ನೇ ಮಹಡಿಯಲ್ಲಿ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಆಸಕ್ತ ನೋಂದಾಯಿತ ಸಂಘ- ಸಂಸ್ಥೆಗಳು ದಾಖಲೆಗಳೊಂದಿಗೆ ಆಗಮಿಸಲು ಆರ್ಟಿಸಾನ್ ಕ್ಲಸ್ಟರ್ ಫೆಡರೇಷನ್ ಮನವಿ ಮಾಡಿದೆ.
ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ, ಆರ್ಟಿಸಾನ್ ಹಬ್, ಬೆಂಗಳೂರು- ಮುಂಬೈ ಇಂಡಸ್ಟ್ರಿಯಲ್ ಕಾರಿಡಾರ್, ವಿಜ್ಞಾನಗುಡ್ಡ ಬಗ್ಗೆ ಜನಜಾಗೃತಿ ಮೂಡಿಸಿ ಜಿಲ್ಲೆಯ ಜನತೆ ಹೆಚ್ಚಿನ ರೀತಿಯಲ್ಲಿ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಹಾಗೂ ವಿವಿಧ ಉತ್ಪನ್ನವಾರು ರಚಿಸುವ 150 ಕ್ಲಸ್ಟರ್ಗಳ ಬಗ್ಗೆಯೂ ಜನಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಫೆಡರೇಷನ್ ರೂಪಿಸಲಿದೆ.
ಪರಿಣಿತ ತಜ್ಞರು, ಆಸಕ್ತರು ಸೂಕ್ತ ಸಲಹೆ ಮಾರ್ಗದರ್ಶನ ನೀಡಲು ಮನವಿ ಮಾಡಲಾಗಿದೆ ಎಂದು ಕುಂದರನಹಳ್ಳಿ ರಮೇಶ್ ತಿಳಿಸಿದ್ದಾರೆ.