ಕಾಂಗ್ರೆಸ್ನಿಂದ ಮಾದಿಗರಿಗೆ ಟಿಕೆಟ್ ನೀಡಲು ಆಗ್ರಹ
ಪಾವಗಡ: ಮುಂಬರುವ ಚಿತ್ರದುರ್ಗ ಲೋಕಸಭೆ ಕ್ಷೇತ್ರ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಮಾದಿಗರಿಗೆ ಟಿಕೆಟ್ ನೀಡುವಂತೆ ಇಲ್ಲಿನ ಅನೇಕ ದಲಿತ ಪರ ಸಂಘಟನೆಗಳು ಒತ್ತಾಯಿಸಿವೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಮುಖಂಡ ಕೋರ್ಟ್ ನರಸಪ್ಪ ಕಳೆದ 15ವರ್ಷಗಳಿಂದ ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಮಾದಿಗ ಜನಾಂಗದವರು ಕಾಂಗ್ರೆಸ್ ಟೆಕೆಟ್ ಪಡೆಯುವಲ್ಲಿ ವಂಚಿತರಾಗಿದ್ದು ಈ ಬಾರಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಬಹುಸಂಖ್ಯಾತ ಮತಗಳಿರುವ ಮಾದಿಗ ಜನಾಂಗಕ್ಕೆ ಟೆಕೆಟ್ ನೀಡುವಂತೆ ಕೆಪಿಸಿಸಿ ವರಿಷ್ಠರಲ್ಲಿ ಅವರು ಮನವಿ ಮಾಡಿದರು. ಬಿ.ಪಿ.ಪ್ರಕಾಶ್ಮೂರ್ತಿ ಮಾತನಾಡಿ ತಾವು ಲೋಕಸಭೆ ಚುನಾವಣೆಯಲ್ಲಿ ಸ್ವರ್ಧಿಸುವುದಾಗಿ ತಿಳಿಸಿದರು. ಜನಪರ ಹೋರಾಟದ ಹಿನ್ನೆಲೆಯಲ್ಲಿ ಬಂದ ನಾನು ಕಳೆದ 30ವರ್ಷಗಳಲ್ಲಿ ಶಾಶ್ವತ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಚಿತ್ರದುರ್ಗದಲ್ಲಿ ಶಾಲಾ ಕಾಲೇಜುಗಳನ್ನು ತೆರೆಯುವ ಮೂಲಕ ಅನೇಕ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿದ್ದೇನೆ. ಜನಸೇವೆ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಟಿಕೆಟ್ ತಮಗೆ ನೀಡಿ ಎಂದು ಈಗಾಗಲೇ ಕೆಪಿಸಿಸಿಗೆ ಮನವಿ ಮಾಡಿದ್ದೇನೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ವಕೀಲ ಚಿತ್ರದುರ್ಗ ಚಂದ್ರಣ್ಣ, ಶ್ರೀನಿವಾಸ್, ಕಡಮಲಕುಂಟೆ ರಾಮಾಂಜಿನಪ್ಪ ಇದ್ದರು.