ಅಪರ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
ಕ.ಪ್ರ. ವಾರ್ತೆ ತುಮಕೂರು ಜು.19
ತುಮಕೂರಿನ ಕುಣಿಗಲ್ ರಸ್ತೆಯ ರೇಲ್ವೆ ಬ್ರಿಡ್ಜ್ ಕೆಳಗಡೆ ಇರುವ ರಸ್ತೆಗಳಲ್ಲಿ ಗುಂಡಿ ಬಿದ್ದಿರುವ ಬಗ್ಗೆ ಬಂದ ದೂರಿನ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ ಅವರು ನಗರಸಭೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆನಡೆಸಿದರು.
ಈ ಸಂದರ್ಭದಲ್ಲಿ ಪೆದ್ದಪ್ಪಯ್ಯ ಅವರು ಚರಂಡಿ ಕಟ್ಟಿ ರಸ್ತೆ ಮೇಲೆ ನೀರು ಹರಿಯುತ್ತಿದ್ದನ್ನು ಗಮನಿಸಿ ಚರಂಡಿಗೆ ಕಟ್ಟಿಕೊಂಡಿರುವ ಮಣ್ಣನ್ನು ತೆಗೆಸಿ ಅಂಡರ್ಪಾಸ್ನಿಂದ ನೀರನ್ನು ಸರಾಗವಾಗಿ ಹೋಗಲು ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಒಂದು ವೇಳೆ ಇದನ್ನು ದುರಸ್ತಿ ಮಾಡದೇ ಇದ್ದರೆ ಸಂಬಂಧಫಟ್ಟವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಈ ರಸ್ತೆಗಳು ಗುಂಡಿ ಬಿದ್ದಿದ್ದು ಚರಂಡಿ ಸರಿ ಇಲ್ಲದ ಕಾರಣ ಸುಮಾರು ದಿನಗಳ ಹಿಂದೆ ಮಳೆ ನೀರು ನಿಂತಿದ್ದ ಪರಿಣಾಮ ಚರಂಡಿಗೆ ಬಾಲಕಿಯೊಬ್ಬಳು ಬಿದ್ದಿದ್ದಳು. ಸಾರ್ವಜನಿಕರೇ ಆಕೆಯನ್ನು ಚರಂಡಿಯಿಂದ ಮೇಲಕ್ಕೆ ಎತ್ತಿದ್ದರು. ಇದೇ ಅಲ್ಲದೇ ಖಾಸಗಿ ಬಸ್ಸೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರನ ಕಾಲು ಮುರಿದ ಘಟನೆ ಕೂಡ ನಡೆದಿತ್ತು.