ಜನಪರ ಬಜೆಟ್: ಶ್ಲಾಘನೆ
ತಿಪಟೂರು: ಬಿಜೆಪಿ ಸರ್ಕಾರವು ಮಠ- ಮಾನ್ಯ ಪರ ಬಜೆಟ್ ಮಂಡಿಸುತ್ತಿದ್ದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಪರ ಬಜೆಟ್ ಮಂಡಿಸುವ ಮೂಲಕ ಜನಸಾಮಾನ್ಯರ ಬಡವರ, ಶ್ರಮಿಕರ, ರೈತರ ನೋವುಗಳಿಗೆ ಸ್ಪಂದಿಸಿರುವ ಸರ್ಕಾರ ತಮ್ಮದು ಎಂದು ಸಾಬೀತುಪಡಿಸಿದ್ದಾರೆಂದು ಸಂಗೊಳ್ಳಿ ರಾಯಣ್ಣ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಎಲ್.ಪಿ. ಯದುನಂದನ ತಿಳಿಸಿದ್ದಾರೆ. ಅಹಿಂದ ವರ್ಗಗಳ ನೇತಾರರಾದರೂ ರಾಜ್ಯದ ಮುಖ್ಯಮಂತ್ರಿಗಳು ನಾಡಿನ ಎಲ್ಲಾ ಜಾತಿಗಳ ಅಭ್ಯುದಯ ಪೂರಕವಾದ ಮುಂಗಡ ಪತ್ರ ಮಂಡಿಸಿರುವುದು ಗಮನಿಸಬೇಕಾದ ಅಂಶ ಎಂದರು.