ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

27ರಿಂದ ಕ್ರಿಕೆಟ್ ಪಂದ್ಯಾವಳಿ

Rashmi Kasaragodu
Updated On : 21 Jul 2013, 12:54 pm

ಶಿರಾ: ಜೆಡಿಎಸ್ ಯುವ ಘಟಕ ಬನ್ನಿನಗರ ಶಿರಾ ವತಿಯಿಂದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿಯನ್ನು ಜು. 27 ಶನಿವಾರ ಮತ್ತು 28 ಭಾನುವಾರ ಪಟ್ಟಣದ ಮಾಧವ ವಿದ್ಯಾಮಂದಿರದ ಆವರಣದಲ್ಲಿ ನಡೆಸಲಾಗುವುದು. ಆಸಕ್ತ ತಂಡಗಳು ಜು. 26 ರೊಳಗೆ ನೋಂದಾಯಿಸಿಕೊಳ್ಳಬೇಕೆಂದು ನಗರಸಭೆ ಸದಸ್ಯ ಅಂಜನಪ್ಪ ತಿಳಿಸಿದ್ದಾರೆ. ಕಿರಣ್(ಮೊ. 9900336161, 7411 001963, 9035903720) ಸಂಪರ್ಕಿಸಲು ಕೋರಲಾಗಿದೆ.
ಕಬ್ಬಿಣಾಂಶ ಮಾತ್ರೆ ವಿತರಣೆ
ಶಿರಾ: ಮಕ್ಕಳನ್ನು ರಕ್ತಹೀನತೆ ತಪ್ಪಿಸಲು ರಾಜ್ಯ ಸರ್ಕಾರ ಕಬ್ಬಿಣಾಂಶ ಮಾತ್ರೆ ನೀಡುವ ಮೂಲಕ ಯೋಜನೆಗೆ ಚಾಲನೆ ನೀಡಿದ್ದು, ಈ ಯೋಜನೆಯಿಂದ ಶಿಕ್ಷಕರ ಜವಾಬ್ದಾರಿ ಹೆಚ್ಚಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ತಿಮ್ಮರಾಜು ತಿಳಿಸಿದರು.
  ಪಟ್ಟಣದಲ್ಲಿ ಮಕ್ಕಳಿಗೆ ಕಬ್ಬಿಣಾಂಶದ ಮಾತ್ರೆಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಈಗಿನ ಆಹಾರದಲ್ಲಿ ಒಳ್ಳೆಯ ಸತ್ವವಿಲ್ಲ. ಇದರ ಜೊತೆಗೆ ಕಾಯಿಲೆಗಳು ಹೆಚ್ಚಾಗುತ್ತಿವೆ. ಇಂತಹ ಕಾಯಿಲೆಗಳು ಬಾರದಿರಲೆಂದು ಸರ್ಕಾರ ಮಕ್ಕಳಿಗೆ ಮಾತ್ರೆ ವಿತರಿಸತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳಿ ಎಂದರು.
 ಜಿಪಂ ಸದಸ್ಯ ಅರೆಹಳ್ಳಿ ರಮೇಶ್ ಉದ್ಘಾಟಿಸಿದರು. ತಾಪಂ ಉಪಾಧ್ಯಕ್ಷ ಉದಯಶಂಕರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಾಚಾರ್ಯ ಪಿ.ಎಚ್. ಮಹೇಂದ್ರಪ್ಪ, ಸಿಡಿಪಿಓ ಸಿದ್ದರಾಜು, ಬಿಇಒ ರಾಜ್ಕುಮಾರ್, ಉಪ ಪ್ರಾಚಾರ್ಯ ರಾಮಚಂದ್ರಪ್ಪ, ಇಸಿಒ ಪಾಟೀಲ್ ಪ್ರಭುವೀರ್ ಮತ್ತಿತರರು ಹಾಜರಿದ್ದರು.
ಇಬ್ಬರು ಸಿಬ್ಬಂದಿ ತಲೆದಂಡ
ಕುಣಿಗಲ್: ತಾಲೂಕು ಪಂಚಾಯಿತಿ ಎಸ್ಜೆಎಸ್ಆರ್ವೈ ಯೋಜನೆಯಡಿಯಲ್ಲಿ ಕಳೆದ ಮೂರು ಸಾಲಿನಲ್ಲಿ ನಡೆದರುವ ಕೋಟ್ಯಂತರ ರು. ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಒಬ್ಬರ ತಲೆದಂಡವಾಗಿದ್ದು, ಶನಿವಾರ ಇಬ್ಬರು ಸಿಬ್ಬಂದಿ ತಲೆದಂಡವಾಗಿದೆ. ತಾಪಂನ ಎಸ್ಜೆಎಸ್ಆರ್ವೈ ಯೋಜನೆಯ 2009- 10, 2010- 11 ಹಾಗೂ 2011- 12ನೇ ಸಾಲಿನಲ್ಲಿ ನಡೆದಿರುವ ಕೋಟ್ಯಂತರ ರು. ಹಗರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ದ್ವಿತೀಯ ದರ್ಜೆ ಸಹಾಯಕ ಡಿ.ಎಂ. ಸಂದೀಪ್ ಅಮಾನತುಗೊಂಡಿದ್ದು, ಪ್ರಕರಣದ ವಿಚಾರಣೆಗಾಗಿ ಶುಕ್ರವಾರ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಕುಣಿಗಲ್ ತಾಪಂ ಕಾರ್ಯಾಲಯದಲ್ಲಿ ದಾಖಲೆ ವಶಪಡಿಸಿಕೊಂಡು ತೆರಳಿದರು. ವಿಚಾರಣೆ ತೀವ್ರಗೊಳಿಸಿರುವ ಅಧಿಕಾರಿಗಳು, ಶನಿವಾರ ತಾಪಂನ ಮತ್ತೊರ್ವ ದ್ವಿತೀಯ ದರ್ಜೆ ಸಹಾಯಕ ಶಂಕರ್, ಈ ಹಿಂದೆ ತಾಪಂನ ಪ್ರಥಮದರ್ಜೆ ಸಹಾಯಕರಾಗಿ, ಹಾಲಿ ತಿಪಟೂರು ರೇಷ್ಮೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಟರಾಜ್ ಅವರನ್ನು ಅಮಾನತುಪಡಿಸಿ ಜಿಪಂ ಸಿಇಒ ಆದೇಶ ಹೊರಡಿಸಿದ್ದಾರೆಂದು ತಾಪಂ ಮೂಲಗಳು ತಿಳಿಸಿವೆ.
 


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement