ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕಚ್ಚಾಟವೇ ಬಿಜೆಪಿ ಸೋಲಿಗೆ ಕಾರಣ: ಲಿಂಬಾವಳಿ

Rashmi Kasaragodu
Updated On : 21 Jul 2013, 12:52 pm

ತುಮಕೂರು: ಕಚ್ಚಾಡಿಕೊಂಡಿದ್ದೆ ಬಿಜೆಪಿಯ ಏಕೈಕ ದೋಷ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಆತ್ಮಾವಲೋಕನ ಮಾಡಿಕೊಂಡರು. ಅವರು ಸಿದ್ಧಿವಿನಾಯಕ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಮಾತನಾಡಿದರು.
ಅಭಿವೃದ್ಧಿ ಕೆಲಸ ಮಾಡಿದರೂ ಒಳಜಗಳದಿಂದಾಗಿ ಸೋತೆವು. ಸಣ್ಣ- ಪುಟ್ಟ ತಪ್ಪುಗಳನ್ನು ಮಾಧ್ಯಮಗಳು ದೊಡ್ಡದಾಗಿ ಬಿಂಬಿಸಿದವು. ರಾಜಕೀಯ ಪಕ್ಷಗಳಿಗೆ ಚುನಾವಣೆ ಅಗ್ನಿ ಪರೀಕ್ಷೆ ಇದ್ದ ಹಾಗೆ. ಪಕ್ಷ ಸಂಕಷ್ಟದ ಸನ್ನಿವೇಶದಲ್ಲಿ ಸುರೇಶ್ಗೌಡರಿಗೆ ಜಿಲ್ಲಾ ಬಿಜೆಪಿ ಸಾರಥ್ಯ ವಹಿಸಲಾಗಿದೆ ಎಂದರು. ಕೌಟುಂಬಿಕ ವಾತಾವರಣದಲ್ಲಿ ಕಳೆದ 15 ದಿನಗಳಿಂದ ಜಿಲ್ಲಾ ಬಿಜೆಪಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಅಧ್ಯಕ್ಷ ಸ್ಥಾನ ಕೇವಲ ಹುದ್ದೆಯಲ್ಲ. ಅದೊಂದು ಜವಾಬ್ದಾರಿಯುತ ಸ್ಥಾನ. ಮುಂಬರುವ ದಿನಗಳು ಕಷ್ಟದ ದಿನಗಳು. ಗೊಂದಲದ ಕಾರಣದಿಂದಾಗಿ ಅಧಿಕಾರ ಕಳೆದುಕೊಂಡಿದ್ದೇವೆ. ಮತ್ತೆ ಕರ್ನಾಟಕದಲ್ಲಿ ಅಧಿಕಾರ ಹಿಡಿಯಲು ಪಕ್ಷವನ್ನು ತಳಮಟ್ಟದಿಂದ ಕಟ್ಟುವ ಸ್ಥಿತಿ ಇದೆ. ತುಮಕೂರಿನಂತಹ ದೊಡ್ಡ ಜಿಲ್ಲೆಗೆ ಶಾಸಕ ಸುರೇಶ್ಗೌಡ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಪಕ್ಷಕ್ಕೆ ಬಲ ಬಂದಂತೆ ಆಗಿದೆ. ಪಕ್ಷದ ಸಂವಿಧಾನದಂತೆ ಚುನಾವಣಾ ಪ್ರಕ್ರಿಯೆ ನಡೆಸಲಾಗಿದೆ ಎಂದರು.
ಸಂಘ ಪರಿವಾರದ ಸಿದ್ಧಾಂತ ಜಾರಿಗೊಳಿಸುವ, ಬಲಪಡಿಸುವ ಜವಾಬ್ದಾರಿ ಪಕ್ಷದ್ದು. ಚುನಾವಣೆಗಳಲ್ಲಿ ಏಳುಬೀಳು ಇದ್ದದ್ದೆ. ಆದರೆ, ಇದಕ್ಕಾಗಿ ಎದೆಗುಂದುವುದಿಲ್ಲ. ಪಕ್ಷ ದೇಶದಲ್ಲಿ ನಡೆದಿರುವ ಅವಾಂತರ, ವಿಕೋಪ ಎಲ್ಲವನ್ನು ಕಂಡು ಬೆಳೆದಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement