ಡಾ. ಅಂಬೇಡ್ಕರ್ ಭಾವಚಿತ್ರ ಕೊಡುಗೆ
ಕ.ಪ್ರ. ವಾರ್ತೆ ತಿಪಟೂರು ಜು.20
ತಾಲೂಕಿನ ಹೊನ್ನವಳ್ಳಿ ಹೋಬಳಿ ಎಚ್. ಭೈರಾಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮತ್ತು ಅಂಗನವಾಡಿ ಕೇಂದ್ರದ ಮಕ್ಕಳಿಗೆ ಕೆಜೆಪಿ ಮುಖಂಡರಾದ ಲೋಕೇಶ್ವರ ಅವರ 56ನೇ ಹುಟ್ಟುಹಬ್ಬದ ಪ್ರಯುಕ್ತ ತಾಲೂಕು ಸೇವಾಲಾಲ್ ಲಂಬಾಣಿ ಸಂಘದ ಅಧ್ಯಕ್ಷ ಬಿ.ಟಿ.ಕುಮಾರಲ್ಸಿಹಿ ಹಂಚುವ ಮೂಲಕ ಹಾಗೂ ಶಾಲೆಗೆ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಕೊಡುಗೆಯಾಗಿ ನೀಡಿದರು. ಶಾಲೆಯ ಶಿಕ್ಷಕಿಯರಾದ ಪ್ರಣಿತಕುಮಾರ್, ಸೀಮಾ, ಎಸ್ಡಿಎಂಸಿ ಅಧ್ಯಕ್ಷೆ ಸುಧಾ, ಸಂಘದ ತಾ. ಸಂಚಾಲಕ ಕಿರಣ್, ಬಾಬು ನಾಯ್ಕ, ಕಲ್ಲೇಶ್ ನಾಯ್ಕ, ಚಂದ್ರ ನಾಯ್ಕ, ಎಂ.ಮಂಜುನಾಥ, ರಾಮನಾಯ್ಕ, ಉಮೇಶ್, ಸಿದ್ದನಾಯ್ಕ, ಕೃಷ್ಣಪ್ಪ, ಹೊನ್ನಪ್ಪ ಉಪಸ್ಥಿತರಿದ್ದರು. ನಂತರ ಲೋಕೇಶ್ವರವರನ್ನು ಅವರ ಸ್ವಗೃಹ ತಿಪಟೂರಿನಲ್ಲಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.