ರೋಟರಿ ಕ್ಲಬ್ಪದಾಧಿಕಾರಿಗಳ ಪದಗ್ರಹಣ
ಹೊಳೆನರಸೀಪುರ: ರೋಟರಿ ಸಂಸ್ಥೆ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲು ಎಲ್ಲ ಸದಸ್ಯರೂ ಸೇವಾಕಾಂಕ್ಷೆಯೊಂದಿಗೆ ತಮ್ಮನ್ನು ತೊಡಗಿಸಿಕೊಂಡಾಗ ಮಾತ್ರ ಸಾಧನೆ ಸಾಧ್ಯವೆನಿಸುತ್ತದೆ ಎಂದು ಹಾಸನಾಂಬ ಬಿ.ಇಡಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ವಿ.ನರಹರಿ ತಿಳಿಸಿದರು.
ತಾಲೂಕಿನ ಶ್ರೀರಾಮದೇವರ ಅಣೆಕಟ್ಟೆ ಬಳಿಯಲ್ಲಿನ ಪಾಲಿಕ ರೆಸಾರ್ಟ್ನಲ್ಲಿ ನಡೆದ ರೋಟರಿ ಕ್ಲಬ್ನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ನೂತನ ಪದಾಧಿಕಾರಿಗಳಿಗೆ ಸೇವಾ ಪ್ರಮಾಣವಚನ ಬೋಧಿಸಿ ಅವರು ಮಾತನಾಡಿದರು.
ಯಾವುದೇ ಸಂಸ್ಥೆಯೂ ಯಾರೊಬ್ಬರ ಶ್ರಮದಿಂದ ಮಾತ್ರವೆ ಸಾಧನೆಗೈಯಲು ಸಾಧ್ಯವಾಗದು. ಅದು ಎಲ್ಲರ ಸಾಮೂಹಿಕ ಶ್ರಮದಿಂದ ಮಾತ್ರ ಸಾಧ್ಯವಾಗಬಲ್ಲದು. ಆದ್ದರಿಂದ ರೋಟರಿ ಸದಸ್ಯರು ಮಹತ್ವಾಕಾಂಕ್ಷೆ ಮೈಗೂಡಿಸಿಕೊಂಡು ಆತ್ಮವಿಶ್ವಾಸದಿಂದ ಸಾಮಾಜಿಕ ಕಾರ್ಯಚಟುವಟಿಕೆ ಹಮ್ಮಿಕೊಳ್ಳುವಂತೆ ಹೇಳಿದರು.
ರೋಟರಿಯ ಜೋನಲ್ ಲೆಫ್ಟಿನೆಂಟ್ ಡಾ.ಸುಧೀರ್ ಬೆಂಗಳೂರ್ ಸಂಸ್ಥೆಯ ದ್ಯೇಯೋದ್ಧೇಶ, ಕರ್ತವ್ಯಗಳು ಹಾಗೂ ಭವಿಷ್ಯದಲ್ಲಿ ಸಂಸ್ಥೆಯು ಹಮ್ಮಿಕೊಳ್ಳಬಹುದಾದ ಕಾರ್ಯಚಟುವಟಿಕೆಗಳ ಕುರಿತಂತೆ ಮಾಹಿತಿ ನೀಡಿದರು.
ರೋಟರಿ ಸಹಾಯಕ ರಾಜ್ಯಪಾಲ ಬಿ.ಎನ್.ರಮೇಶ್ ಮಾತನಾಡಿ, ರಾಷ್ಟ್ರದಲ್ಲಿ 34 ಸಾವಿರಕ್ಕೂ ಅಧಿಕ ರೋಟರಿ ಕ್ಲಬ್ಗಳಿದ್ದು, 12 ಲಕ್ಷಕ್ಕೂ ಮಿಗಿಲಾದ ಸದಸ್ಯರನ್ನು ಹೊಂದಿರುವ ಸಂಸ್ಥೆ ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಜನಪರ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದಾಗಿ ತಿಳಿಸಿದರು.
ರೋಟರಿ ಕ್ಲಬ್ ನೂತನ ಅಧ್ಯಕ್ಷ ಹಾಗೂ ಹಿರಿಯ ಆರೋಗ್ಯ ಸಹಾಯಕ ಆರ್.ಬಿ.ಪುಟ್ಟೇಗೌಡ ಮಾತನಾಡಿ, ಸಂಸ್ಥೆಯು ವಿಭಿನ್ನ ಚಿಂತನೆಗಳ ಮನಸ್ಥಿತಿಯವರೊಡಗೂಡಿ ಸೇವಾ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದೆ ಎಂದರು.
ನೂತನ ರೋಟರಿ ಸದಸ್ಯರಿಗೆ ಅಭಿನಂದನೆ, ನಾನಾ ರೋಟರಿ ಸಂಸ್ಥೆಗಳಿಂದ ಆಗಮಿಸಿದ್ದ ಪದಾಧಿಕಾರಿಗಳು ಹಾಗೂ ಅತಿಥಿಗಳಿಗೆ ಗೌರವಾಧರನೆ ನೀಡಲಾಯಿತು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುವ ಗ್ರೀನ್ವುಡ್ ಆಂಗ್ಲ ಶಾಲೆಯ ವಿದ್ಯಾರ್ಥಿನಿ ಬಿಂದುಶ್ರೀ ಪೋಷಕರಿಗೆ ರೋಟರಿಯಿಂದ ಸನ್ಮಾನಿಸಲಾಯಿತು. ನಿರ್ಗಮಿತ ಅಧ್ಯಕ್ಷ ಹಾಗೂ ಕಾರ್ಯದರ್ಶಿ ರಂಗನಾಥ್, ವೆಂಕಟೇಶ್, ನೂತನ ಕಾರ್ಯದರ್ಶಿ ಶಿವಕುಮಾರ್ ಇತರರು ಇದ್ದರು.
ಮ್ಯಾನೇಜ್ಮೆಂಟ್ಅಲ್ಪಾವಧಿ ತರಬೇತಿ
ಹಾಸನ: ಕರ್ನಾಟಕ ಸರ್ಕಾರ, ಪ್ರವಾಸೋದ್ಯಮ ಇಲಾಖೆಯ ಧನ ಸಹಾಯದಿಂದ ಪಜಾ ವಿಶೇಷ ಯೋಜನೆ ಹಾಗೂ ಗಿರಿಜನ ಉಪಯೋಜನೆ ಅಡಿಯಲ್ಲಿ, ಅರ್ಹ ಪಜಾ, ಪಪಂ ನಿರುದ್ಯೋಗಿ ಯುವಕ ಯುವತಿಯರಿಗೆ ಔಪಚಾರಿಕಾ (ಹೋಟೆಲ್ ಉದ್ಯಮ) ಕ್ಷೇತ್ರದಲ್ಲಿ ಉಚಿತವಾಗಿ ಕೆಲವು ತರಬೇತಿ ಪ್ರಾರಂಭಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಗಸ್ಟ್ 1ರಂದು ತರಬೇತಿ ಪ್ರಾರಂಭ. ಫುಡ್ಕ್ರಾಫ್ಟ್ ಇನ್ಸ್ಟಿಟ್ಯೂಟ್, ಯಗಚಿ ಜಲಾಶಯ ಮುಂಭಾಗ, ಬೇಲೂರು- 573 115, ಹಾಸನ ಜಿಲ್ಲೆ. ಇಲ್ಲಿ ತರಬೇತಿ ನೀಡಲಾಗುವುದು. ತರಬೇತಿಯ ಕ್ಷೇತ್ರಗಳು - ಆಹಾರ ತಯಾರಿಕೆ, ಆಹಾರ ವಿತರಣೆ, ವಸತಿ ನಿರ್ವಹಣೆ. ತರಬೇತಿ ಪಡೆಯಲು ಅರ್ಹತೆ- ಅಭ್ಯರ್ಥಿ ಕನಿಷ್ಠ 8ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದು, ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿರಬೇಕು. 18 ರಿಂದ 28 ವರ್ಷದೊಳಗಿರಬೇಕು.
ನಿಗದಿಪಡಿಸಿದ ಅರ್ಜಿ ನಮೂನೆಯಲ್ಲಿ ಇತ್ತೀಚಿನ 2 ಭಾವಚಿತ್ರದೊಂದಿಗೆ ಸಲ್ಲಿಸಬೇಕು. ಮೂಲ ಜಾತಿ ಪ್ರಮಾಣ ಪತ್ರ. ವಯಸ್ಸಿನ ಬಗ್ಗೆ ಶಾಲೆಯಿಂದ ಪಡೆದ ವರ್ಗಾವಣೆ ಪತ್ರ ಅಂಕಪಟ್ಟಿ ಪ್ರತಿ, ಪಡಿತರ ಚೀಟಿ ಪ್ರತಿ ಮತದಾರರ ಗುರುತಿನ ಚೀಟಿ ಆಧಾರ್ ಕಾರ್ಡ್ ಚಾಲನಾ ಪರವಾನಗಿ ಪತ್ರ ಸಲ್ಲಿಸಬೇಕು. ಕಚೇರಿ ವೇಳೆಯಲ್ಲಿ ಅರ್ಜಿ ಪಡೆದು ಸಲ್ಲಿಸಬಹುದು ಎಂದು ಬಿ. ಜಗದೀಶ್, ಫುಡ್ ಕ್ರಾಫ್ಟ್ ಇನ್ಸ್ಟಿಟ್ಯೂಟ್, ಯಗಚಿ ಜಲಾಶಯದ ಮುಂಭಾಗ, ಬೇಲೂರು - 573 115, ಹಾಸನ ಜಿಲ್ಲೆ ಸಂಪರ್ಕಿಸಿ.