ವಾಹನ ಡಿಕ್ಕಿ: ಗರ್ಭಿಣಿ ಜಿಂಕೆ ಸಾವು
ಸಕಲೇಶಪುರ: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಗರ್ಭಿಣಿ ಜಿಂಕೆ ಸ್ಥಳದಲ್ಲೆ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 48 ರ ರಾಟೇಮಾನೆ ಸಮೀಪ ಶನಿವಾರ ನಡೆದಿದೆ. ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಜಿಂಕೆಯ ಹೊಟ್ಟೆಯಲ್ಲಿದ್ದ ಮರಿ ಸಹ ಹೊರಬಂದಿದ್ದು, ಭೀಕರವಾಗಿ ಸಾವಿಗೀಡಾಗಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ 9 ಜಿಂಕೆಗಳು ವಾಹನ ಡಿಕ್ಕಿಯಿಂದ ಮೃತಪಟ್ಟಿವೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.