ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕೆರೆಗೆ ರಾಸಾಯನಿಕ ಪದಾರ್ಥಗಳ ತ್ಯಾಜ್ಯ

Rashmi Kasaragodu
Updated On : 22 Jul 2013, 1:16 am

ಕುಣಿಗಲ್: ತಾಲೂಕಿನ ಅಂಚೇಪಾಳ್ಯ ಕೈಗಾರಿಕಾ ವಸಹಾತು ಪ್ರದೇಶದ ಸಮೀಪವಿರುವ ಗೊಟ್ಟಿಕೆರೆ ಗ್ರಾಮದ ಕೆರೆಗೆ, ಸಮೀಪದ ಕೆಲ ಕಾರ್ಖಾನೆಗಳು ಅಪಾಯಕಾರಿ ರಾಸಾಯನಿಕ ಪದಾರ್ಥಗಳ ತ್ಯಾಜ್ಯಗಳನ್ನು ಹರಿಬಿಡುವ ಮೂಲಕ, ಈ ಭಾಗದ ಪರಿಸರಕ್ಕೆ ಹಾನಿ ಉಂಟು ಮಾಡಿದ್ದು, ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಕರವೇ (ನಾರಾಯಣಗೌಡ ಬಣ)
ತಾಲೂಕು ಘಟಕದ ಅಧ್ಯಕ್ಷ ಮಂಜುನಾಥ್ ಆಗ್ರಹಿಸಿದ್ದಾರೆ.
ಈ ಬಗ್ಗೆ ವಿವರ ನೀಡಿದ ಅವರು, ಅಂಚೇಪಾಳ್ಯ ಕೈಗಾರಿಕಾ ವಸಾಹತು ಪ್ರದೇಶದ ಮೂಲಕ ನೈಸರ್ಗಿಕ ಹರಿದು ಬರುವ ಮಳೆನೀರಿನ ರಾಯಗಾಲುವೆ ಹಾದು ಬಂದಿದ್ದು, ಸದರಿ ರಾಯಗಾಲುವೆಗೆ  ಕೈಗಾರಿಕೆ ವಸಾತು ಪ್ರದೇಶದಿಂದ ಬರುವ ದೊಡ್ಡಚರಂಡಿಯನ್ನು ಸಂಪರ್ಕ ಕಲ್ಪಿಸಿಲಾಗಿದೆ, ಅಂಚೇಪಾಳ್ಯ ಕೈಗಾರಿಕಾ ವಸಹಾತು ಪ್ರದೇಶದಲ್ಲಿ ನೂರಕ್ಕೂ ಹೆಚ್ಚು ಕಾರ್ಖಾನೆಗಳು ಸಕ್ರಿಯವಾಗಿವೆ.
ಅಪಾಯಕಾರಿ: ಸದರಿ ಕಾರ್ಖಾನೆಗಳ ಪೈಕಿ ಕೆಲ ಕಾರ್ಖಾನೆಗಳು ಅಪಾಯಕಾರಿ ರಾಸಾಯನಿಕವನ್ನು ಶುದ್ಧೀಕರಿಸಲು ಸೇರಿದಂತೆ ಇತರೆ ಕಾರ್ಯಕ್ಕೆ ಬಳಸಿದರೆ, ಮತ್ತೆ ಕೆಲ ಕಾರ್ಖಾನೆಯವರು ಕೃಷಿ ಉತ್ಪಾದನೆ ಆಧರಿತವಾಗಿದ್ದು, ಕೃಷಿ ಉತ್ಪಾದನೆಯನ್ನು ಶುದ್ಧೀಕರಿಸಲು ರಾಸಾಯನಿಕ ಬಳಸಿ ನಂತರ ಅವುಗಳನ್ನು ತೊಳೆಯಲು ಅಘಾದ ಪ್ರಮಾಣದ ನೀರನ್ನು ಬಳಸಿ, ಶುದ್ಧಿಗೊಳಿಸಿದ ನಂತರ ಬರುವ ತ್ಯಾಜ್ಯಯುಕ್ತ ನೀರನ್ನು, ಪರಿಸರ ಇಲಾಖೆಯ ನಿಯಮಾವಳಿಗಳ ಅನುಸಾರ ಸಂಪೂರ್ಣವಾಗಿ ವಿವಿಧ ಹಂತದಲ್ಲಿ ಪ್ರಕ್ರಿಯ ನಡೆಸಿ, ಶುದ್ಧಿಗೊಳಿಸಿದ ನೀರನ್ನು ದೊಡ್ಡರಂಡಿಗೆ ಹರಿಬಿಡುತ್ತಾರೆ. ಆದರೆ ಮಳೆ ಹೆಚ್ಚಾಗಿ ಬರುವ ಸಂಧರ್ಭದಲ್ಲಿ ಕೆಲ ಕಾರ್ಖಾನೆಯವರು, ಶುದ್ಧೀಕರಣ ಕ್ರಿಯೆ ನಡೆಸದೆ ಕಲುಷಿತ, ರಸಾಯನಿಕಯುಕ್ತ ನೀರನ್ನು ನೇರವಾಗಿ ಚರಂಡಿಗೆ ಹರಿಬಿಡುವ  ಕಾರಣ, ಕಲುಷಿತಗೊಂಡ  ನೀರು ವಸಹಾತು ಪ್ರದೇಶದ ಚರಂಡಿ ಮೂಲಕ ರಾಯಗಾಲುವೆ ಸೇರಿ, ಗೊಟ್ಟಿಕೆರೆ ಗ್ರಾಮದ ಕೆರೆಯಲ್ಲಿ ಸಂಗ್ರಹಗೊಂಡು, ಕೆರೆಯ ಇಡೀ ನೀರು ಕಲುಷಿತಗೊಂಡು ದುರ್ವಾಸನೆ ಬೀರುತ್ತಿದೆ. ಈ ಭಾಗದ ಗ್ರಾಮಸ್ತರು ಹಾಗೂ ಜಾನುವಾರುಗಳು ಪರದಾಡುವ ಸ್ಥಿತಿ ಉಂಟಾಗಿದೆ.
ಗುರುಪೂರ್ಣಿಮಾಚರಣೆ
ತುಮಕೂರು: ಇಲ್ಲಿನ ಜಯನಗರ ಪೂರ್ವ ಬಡಾವಣೆಯ 10ನೇ ಕ್ರಾಸ್ನಲ್ಲಿರುವ ಶಿರಡಿ ಸಾಯಿ ಮಂದಿರದ ಸಾಯಿಚೇತನ ಚಾರಿಟಬಲ್ ಟ್ರಸ್ಟ್ ವತಿಯಿಂದ ಜು. 22 ರಂದು ಗುರುಪೂರ್ಣಿಮೆ ಅಂಗವಾಗಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಗ್ಗೆ 5.30 ಕ್ಕೆ ಕಾಕಡಾರತಿ ನಡೆಯಲಿದೆ. ನಂತರ ಬಾಬಾರ ವಿಗ್ರಹಕ್ಕೆ ಕ್ಷೀರಾಭಿಷೇಕ ನಡೆಯಲಿದೆ. ಬಳಿಕ ಸಾಮೂಹಿಕ ಶ್ರೀ ಸಾಯಿ ಸತ್ಯನಾರಾಯಣ ಪೂಜೆ, ಪ್ರಸಾದ ವಿನಿಯೋಗ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement