ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ವಿದ್ಯಾರ್ಥಿಗಳಿಂದ ಸುಭದ್ರ ಸಮಾಜ ನಿರ್ಮಾಣ ಸಾಧ್ಯ

Rashmi Kasaragodu
Updated On : 22 Jul 2013, 1:15 am

ಕನ್ನಡಪ್ರಭ ವಾರ್ತೆ   ತುಮಕೂರು   ಜು.21
ವಿದ್ಯಾರ್ಥಿಗಳಿಂದ ಮಾತ್ರ ಸುಭದ್ರ ಸಮಾಜ ನಿರ್ಮಾಣ ಸಾಧ್ಯ ಎಂದು ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಸಿದ್ದಲಿಂಗಸ್ವಾಮಿಗಳು ಪ್ರತಿಪಾದಿಸಿದರು. ಅವರು ತುಮಕೂರಿನ ಸಿದ್ಧಗಂಗಾ ಪ್ರೌಢಶಾಲೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಜ್ಞಾನದ ಜತೆಗೆ ಸಚ್ಚಾರಿತ್ರ್ಯ ಹಾಗೂ ಉತ್ತಮವಾದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವಂತೆ ಪ್ರೇರೇಪಿಸಬೇಕು. ವಿದ್ಯಾರ್ಥಿಗಳಿಂದ ಮಾತ್ರ ಸುಭದ್ರ ಹಾಗೂ ಸುಶಿಕ್ಷಿತ ಸಮಾಜದ ನಿರ್ಮಾಣ ಸಾಧ್ಯ ಎಂದು ಶ್ರೀಗಳು ಹೇಳಿದರು.
ತುಮಕೂರು ಶ್ರೀ ಸಿದ್ಧಗಂಗಾ ಪ್ರೌಢಶಾಲೆ ನಮ್ಮ ಸಂಸ್ಥೆಯ ಜೇಷ್ಠ ಪುತ್ರರಿದ್ದಂತೆ. ಈ ಶಾಲೆಯಲ್ಲಿ ನಗರದ ಅನೇಕ ಶಾಲಾ ಕಾಲೇಜುಗಳ ಪ್ರಾರಂಭವಾಗಿವೆ. ಇಲ್ಲಿ ಅಧ್ಯಯನ ಮಾಡಿದವರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿದ್ದಾರೆ. ಇಂತಹವರಿಂದ ಸ್ಫೂರ್ತಿಯನ್ನು ಪಡೆದು ಶಾಲೆಯ ಮಕ್ಕಳು ಹೆಚ್ಚಿನ ಸಾಧನೆಯನ್ನು ಮರೆಯಬೇಕು ಎಂದರು.
ಶಿಕ್ಷಕರ ಸ್ಫೂರ್ತಿ: ಕಾರ್ಯಕ್ರಮ ಉದ್ಘಾಟಿಸಿದ ತುಮಕೂರು ನಗರದ ಶಾಸಕ ಡಾ. ರಫೀಕ್ ಅಹಮದ್ ಮಾತನಾಡಿ ಸಾಮಾನ್ಯ ವಿದ್ಯಾರ್ಥಿಯು ಸಹ ಸಾಧನೆಯನ್ನು ಮಾಡುತ್ತಾ ಹೋದರೆ ಅಸಾಮಾನ್ಯವಾಗಿ ಬೆಳೆಯಲು ಸಾಧ್ಯ. ಅದಕ್ಕೆ ಶಾಲೆಯ ವಾತಾವರಣ ಶಿಕ್ಷಕರ ಸ್ಫೂರ್ತಿ ದೊರೆತರೆ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬಹುದೆಂದರು.
ಗೆಲ್ಲಲು ಸಿದ್ಧರಾಗಿ: 1944 ರಲ್ಲಿ ನಗರದಲ್ಲಿ ಪ್ರಾರಂಭವಾಗಿರುವ ಶ್ರೀ ಸಿದ್ಧಗಂಗಾ ಪ್ರೌಢಶಾಲೆ ಕಳೆದ 70 ವರ್ಷಗಳಿಂದಲೂ ಶಿಕ್ಷಣ ಕ್ಷೇತ್ರದಲ್ಲಿ ಅದ್ಭುತ ಸಾಧನೆಯನ್ನು ಮಾಡಿರುವುದು ಹೆಮ್ಮೆಯ ಸಂಗತಿ ಎಂದರು.
ಪ್ರತಿಭಾ ಪುರಸ್ಕಾರ ನೀಡಿ ಮಾತನಾಡಿದ ಶಾಲೆಯ ಹಳೆಯ ವಿದ್ಯಾರ್ಥಿ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಿ. ಸುಧಾಕರ್ಲಾಲ್ ಮಾತನಾಡಿ ವಿದ್ಯಾರ್ಥಿಗಳಿಗೆ ಇಂದು ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇದರ ಸದುಪಯೋಗ ಮಾಡಿಕೊಂಡು ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕಗಳನ್ನು ಗಳಿಸಿ ಉತ್ತೀರ್ಣರಾಗುವುದರ ಮೂಲಕ ಜೀವನದ ಪರೀಕ್ಷೆಯನ್ನು ಗೆಲ್ಲಲು ಸಿದ್ಧರಾಗಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕುಮುದಮ್ಮ, ಕುದೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಬಾಲರಾಜು, ಶಾಲೆಯ ನಿವೃತ್ತ ಶಿಕ್ಷಕಿ ರೇಣುಕಾಂಬ ಮೊದಲಾದವರು ಮಾತನಾಡಿದರು. ಜಿಲ್ಲಾ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದ ನಿಖಿಲ್ ಟಿ.ಸಿ. ಸೇರಿದಂತೆ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.
ಶಾಲೆ ಹಳೆಯ ವಿದ್ಯಾರ್ಥಿಗಳಾದ ಕೆ. ವಿದ್ಯಾ ಮತ್ತು ಕೆ.ವಿ. ವಿನುತ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪರವಾಗಿ ಮಾತನಾಡಿದರು. ಪರಿಣಿತ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಉಪಪ್ರಾಂಶುಪಾಲರಾದ ಎಸ್. ನಟರಾಜು ಸ್ವಾಗತಿಸಿದರು.
ಶಿಕ್ಷಕ ಕೆ.ಎಸ್. ಉಮಾಮಹೇಶ್ ನಿರೂಪಿಸಿದರು. ಆರ್.ಎಂ. ಮೃತ್ಯುಂಜಯಪ್ಪ ವಂದಿಸಿದರು. ಇದೇ ಸಂದರ್ಭದಲ್ಲಿ ಬೆಂಗಳೂರಿನ ಸಮಾಜ ಸೇವಕ ದಾನಿ ಕೆ. ಬಾಗೇಗೌಡರು ನಿರ್ಮಿಸಿಕೊಟ್ಟ ಶುದ್ಧ ಕುಡಿಯುವ ನೀರಿನ ಘಟಕವನ್ನು ಸುಧಾಕರ್ಲಾಲ್ ಉದ್ಘಾಟಿಸಿದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement