ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಹಿಳಾ ದೌರ್ಜನ್ಯ ತಡೆಗೆ ಜಾಗೃತಿ ಅಗತ್ಯ: ಬಿ.ಸಿ. ಶೈಲಾ

Vishwanath S
Updated On : 24 Jul 2013, 12:33 pm

ಕ.ಪ್ರ. ವಾರ್ತೆ ,  ತುಮಕೂರು ,  ಜು.23
ಹೆಣ್ಣು ಮಕ್ಕಳಿಗೆ ಸುರಕ್ಷತೆಯ ಅರಿವು, ಜಾಗೃತಿ ಅತ್ಯಗತ್ಯ ಎಂದು ಲೇಖಕಿ ಬಿ.ಸಿ. ಶೈಲಾ ನಾಗರಾಜ್ ಪ್ರತಿಪಾದಿಸಿದರು.
ತುಮಕೂರಿನ ಸಿದ್ದಗಂಗಾ ಬಡಾವಣೆಯ ವಿಶ್ವಬಂಧು ವಿದ್ಯಾರ್ಥಿನಿಲಯದ ಹಾಸ್ಟೆಲ್‌ನಲ್ಲಿ ನಡೆದ ಯುವ ಮಹಿಳಾ ಜಾಗೃತಿ ಅಭಿಯಾನದಲ್ಲಿ ಉಪನ್ಯಾಸ ನೀಡಿದರು.
ಸಮಸ್ಯೆ ಎದುರಿಸುವ, ವಿನಾಕಾರಣ ಬಂದ ಸಮಸ್ಯೆಗಳನ್ನು, ಸವಾಲುಗಳನ್ನು ಎದುರಿಸಲು ಜಾಗೃತಿ ಅತ್ಯಗತ್ಯ. ಅಪಾಯ ಒದಗಿದಾಗ ರಕ್ಷಿಸಿಕೊಳ್ಳುವ ಮನೋಸ್ಥೈರ್ಯ ಅತ್ಯವಶ್ಯಕ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಮಾಜ ಸೇವಕಿ ದಾಕ್ಷಾಯಣಮ್ಮ ನಂಜುಂಡಪ್ಪ ಮಾತನಾಡಿ, ಹೆಣ್ಣುಮಕ್ಕಳು ಸಂಸ್ಕಾರವಂತರಾಗಿ, ಸಂಸ್ಕೃತಿ ಉಳಿಸುತ್ತಾ ದೇಶದ ಅಭಿವೃದ್ಧಿಗೆ ಪೂರಕವಾಗಬೇಕೆಂದರು.
ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್‌ನ ಸುಮಾ ಶ್ರೀಹರ್ಷ, ಸತೀಶ್ ಹೆಬ್ಬಾಕ ಇತರರು ಉಪಸ್ಥಿತರಿದ್ದರು. ವಿಶ್ವಬಂಧು ಮಹಿಳಾ ಹಾಸ್ಟೆಲ್‌ನ ಸಂಸ್ಥಾಪಕ ವಕೀಲ ಲೋಕೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಸೌಭಾಗ್ಯ ಸಿದ್ದಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಲಲಿತಾ ಚನ್ನಬಸಪ್ಪ, ವಿಜಯಾ ಶಂಕರ್, ಮಂಜುಳಾ ಮಹಿಳಾ ಗೀತೆಗಳನ್ನು ಹಾಡಿದರು.
ಪ್ರಸ್ತುತ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಅತ್ಯಾಚಾರದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ಮಹಿಳಾ ಸಂಘಟನೆಯು ನಗರದ ಎಲ್ಲ ಸರ್ಕಾರಿ ಮತ್ತು ಖಾಸಗಿ ಹಾಸ್ಟೆಲ್‌ಗಳಲ್ಲಿ, ಮಹಿಳಾ ಕಾಲೇಜುಗಳಲ್ಲಿ ಯುವ ಮಹಿಳಾ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement