ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಶ್ರದ್ಧೆಯಿಂದ ಯಶಸ್ಸು: ಡಾ. ಶಿವಾನಂದ ಶ್ರೀ

Vishwanath S
Updated On : 24 Jul 2013, 12:33 pm

ಕನ್ನಡಪ್ರಭ ವಾರ್ತೆ, ತುಮಕೂರು, ಜು.23
ಶ್ರದ್ದೆಯಿಂದ ಯಶಸ್ಸು ಸಾಧ್ಯ ಎಂದು ತುಮಕೂರಿನ ಹಿರೇಮಠಾಧ್ಯಕ್ಷ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಪ್ರತಿಪಾದಿಸಿದರು. ತುಮಕೂರಿನ ವಿದ್ಯಾನಿಕೇತನ ಸಂಸ್ಥೆಗಳ ವತಿಯಿಂದ ಏರ್ಪಾಟಾಗಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶ್ರದ್ಧೆ ಹಾಗೂ ಒತ್ತಡರಹಿತ ಮನಸ್ಸಿನಿಂದ ಯಶಸ್ಸು ಸಾಧ್ಯ. ಚುನಾವಣೆಯ ನಂತರ ವಿಜಯೋತ್ಸವ, ಪರೀಕ್ಷಾ ಫಲಿತಾಂಶದ ವಿದ್ಯೋತ್ಸವ ನಡೆಯುತ್ತಿದೆ. ಪ್ರತಿಭೆಗಳಿಗೆ ಪ್ರಪಂಚಾದ್ಯಂತ ಮನ್ನಣೆಯಿದೆ. ವಿದ್ಯಾರ್ಥಿಗಳು ತಮ್ಮ ಗುರಿ ತಲುಪಲು ಅಂದಂದಿನ ಕೆಲಸವನ್ನು ಅಂದೇ ಮಾಡುವುದು ಬಹಳ ಮುಖ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಎನ್.ಆರ್. ಜಗದೀಶ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಲು ಛಲ, ನಿರಂತರ ಯತ್ನ ಅಗತ್ಯ ಎಂದರು.
ಸಂಸ್ಥೆಯ ಕಾರ್ಯದರ್ಶಿ ಡಾ.ಸಿ. ಜಯರಾಮರಾವ್ ಸ್ವಾಗತಿಸಿ, ಜಂಟಿ ಕಾರ್ಯದರ್ಶಿ ಎನ್.ಆರ್. ವಿಶ್ವಾರಾಧ್ಯ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement