ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಎಂಎಸ್‌ಟಿ ರಸ್ತೆಗೆ ನರಸಿಂಹರಾಜು ವೃತ್ತ ಎಂದು ಹೆಸರಿಡಿ

Vishwanath S
Updated On : 1 Aug 2013, 12:28 pm

ತಿಪಟೂರು: ತಾಲೂಕಿನ ಹೊನ್ನವಳ್ಳಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ತಾ.ಶ್ರೀ ಸೇವಾಲಾಲ್ ಲಂಬಾಣಿ ಸಂಘದ ವತಿಯಿಂದ ಕಲ್ಪತರು ನಾಡಿನ ವರಪುತ್ರ, ನಟ, ಹಾಸ್ಯ ಚಕ್ರವರ್ತಿ ದಿ.ನರಸಿಂಹರಾಜು ಅವರ 90ನೇ ಜನ್ಮ ದಿನಾಚರಣೆಯನ್ನು ಎಚ್. ಭೈರಾಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು.
ಈ ವೇಳೆ ಕಸಾಪ ಹೋ.ನಿರ್ದೇಶಕರಾದ ಬಿ.ಟಿ.ಕುಮಾರ್ ಶಾಲೆಯ ಮತ್ತು ಅಂಗನವಾಡಿ ಮಕ್ಕಳಿಗೆ ಸಿಹಿ ವಿತರಿಸಿ ಮಾತನಾಡಿ ತಾಲೂಕಿನ ಹಾಲ್ಕುರಿಕೆಯು ನರಸಿಂಹರಾಜು ಅವರ ಜನ್ಮ ಸ್ಥಳವಾಗಿದ್ದು, ಅವರು ವಾಸವಿದ್ದ  ಮನೆಯು ತುಂಬಾ ಶಿಥಿಲಗೊಂಡಿದ್ದು, ಅಕ್ಕ-ಪಕ್ಕದವರು ಮನೆಯನ್ನು ಆಕ್ರಮಿಸಿಕೊಂಡಿದ್ದಾರೆ.
ಆ ಮನೆಯನ್ನು ಮತ್ತು ಜಾಗವನ್ನು ತಾಲೂಕು ಆಡಳಿತ ವಶಕ್ಕೆ ತೆಗೆದುಕೊಂಡು ಪುನಶ್ಚೇತನಗೊಳಿಸಿ ಸ್ಮಾರಕವನ್ನಾಗಿ ನಿರ್ಮಿಸಬೇಕು. ತಿಪಟೂರಿನ ಕೆ.ಆರ್.ಬಡಾವಣೆಯಲ್ಲಿ ನಿರ್ಮಿಸುತ್ತಿರುವ ಅವರ ಕನಸಿನ ಕೂಸಾದ ರಂಗಮಂದಿರವನ್ನು ಪೂರ್ಣಗೊಳಿಸಬೇಕು.
ಅಲ್ಲದೆ ಎಂ.ಎಸ್.ಟಿ.ರಸ್ತೆಯನ್ನು ನರಸಿಂಹರಾಜು ವೃತ್ತ ಎಂದು ಘೋಷಿಸಬೇಕೆಂದು ಸರ್ಕಾರ ಮತ್ತು ತಾಲೂಕು ಆಡಳಿತವನ್ನು ಒತ್ತಾಯಿಸಿದರು.
ಗ್ರಾ.ಪಂ.ಸದಸ್ಯ ತಿಮ್ಮನಾಯ್ಕ, ಶಿಕ್ಷಕಿಯರಾದ ಪ್ರಣಿತಕುಮಾರ್, ಸೀಮಾ, ತಾ.ಸಂಚಾಲಕ ಕಿರಣ್, ಚಂದ್ರನಾಯ್ಕ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಸುಧಾ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement