ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

'ರ್ಯಾಗಿಂಗ್‌ಗೆ ಕಡಿವಾಣ ಅವಶ್ಯ'

Vishwanath S
Updated On : 1 Aug 2013, 12:09 pm

ಗುಬ್ಬಿ: ಶಾಲಾ ಕಾಲೇಜುಗಳಲ್ಲಿ ಹೆಚ್ಚುತ್ತಿರುವ ರ್ಯಾಗಿಂಗ್ ತಡೆಯಬೇಕು ಎಂದು ಹಿರಿಯ ಶ್ರೇಣಿ ನ್ಯಾಯಾಧೀಶರಾದ ಬಿ.ಎನ್.ಲಾವಣ್ಯಲತಾ ತಿಳಿಸಿದರು.
ಅವರು ಗುಬ್ಬಿ ಪಟ್ಟಣದ ಸರ್ಕಾರಿ ಪದವಿ ಪೂರ್ವಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲೂಕು ವಕೀಲರ ಸಂಘ ಹಮ್ಮಿಕೊಂಡಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ ಪಾಶ್ಚಾತ್ಯ ದೇಶಗಳಲ್ಲಿ ಶಾಲೆಗೆ ಸೇರಿದ ದಿನದಿಂದಲೇ ರ್ಯಾಗಿಂಗ್ ಪ್ರಾರಂಭವಾಗತ್ತದೆ. ನಮ್ಮ ದೇಶದ ಶಾಲಾ ಕಾಲೇಜುಗಳು ಪಾಶ್ಚಾತ್ಯ ಶಿಕ್ಷಣವನ್ನು ಅನುಸರಿಸುವ ಕಾರಣ ರ್ಯಾಗಿಂಗ್ ಎಂಬ ಪಿಡುಗನ್ನು ಅನುಸರಿಸುತ್ತಿದ್ದಾರೆ.ಇದರಿಂದ ಹಾಸ್ಟೆಲ್, ಕಾಲೇಜು, ಬಸ್ ನಿಲ್ದಾಣಗಳಲ್ಲಿ ಈ ಪೈಶಾಚಿಕ ಪ್ರವೃತ್ತಿ ಹೆಚ್ಚುತ್ತಿದೆ. ಕೆಟ್ಟ ಭಾಷೆಯನ್ನು ಆಡುವ ಮೂಲಕ ಗೌರವಕ್ಕೆ ಧಕ್ಕೆ ಬರುವ ರೀತಿಯಲ್ಲಿ ದಾರಿತಪ್ಪಿದ ವಿದ್ಯಾರ್ಥಿಗಳು ನಡೆದುಕೊಳ್ಳುವುದು ಎಲ್ಲೆಡೆ ಕಾಣಬರುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಮಾನಸಿಕ ಆಘಾತ ಹೊಂದಿ
ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ಇದನ್ನು ತಪ್ಪಿಸಬೇಕಾದರೆ ಶೈಕ್ಷಣಿಕ ಸಂಸ್ಥೆಗಳೊಟ್ಟಿಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಕಾನೂನು ಸಹಕಾರವನ್ನು ಪಡೆದು ರ್ಯಾಗಿಂಗ್ ಪ್ರವೃತ್ತಿಯನ್ನು ಮಟ್ಟಹಾಬೇಕಿದೆ ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಗುಬ್ಬಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಕೆ.ಎಸ್.ಸಿದ್ದಲಿಂಪ್ಪ ಇತ್ತೀಚಿನ ದಿನಗಳಲ್ಲಿ ನ್ಯಾಯಾಲಯಗಳು ಮತ್ತು ನ್ಯಾಯಾಧೀಶರು ಜನಸಾಮಾನ್ಯರ ಬಳಿಗೆ ಬಂದು ಕಾನೂನಿನ ಪ್ರಜ್ಞೆ ಮೂಡಿಸುತ್ತಿದ್ದಾರೆ. ಆದ್ದರಿಂದ ನ್ಯಾಯ ಎಲ್ಲರಿಗೂ ಸಿಗುವಂತಾಗುತ್ತಿದೆ. ಕಾಲೇಜಿನ ವ್ಯಾಪ್ತಿಗೆ ಮೀರಿದ ಚಟುವಟಿಕೆಗಳು ಕಾಲೇಜು ಮೈದಾನದಲ್ಲಿ ನಡೆಯುತ್ತಿದ್ದು, ವಿದ್ಯಾರ್ಥಿಗಳಷ್ಟೇ ಅಲ್ಲದೆ ಸಾರ್ವಜನಿಕರಿಗೆ ಕಾನೂನು ಅರಿವು ಮೂಡಿಸಲು ನ್ಯಾಯಾಲಯ ಮತ್ತು ವಕೀಲರು ಮುಂದಾಗಬೇಕಿದೆ. ಆದ್ದರಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಶಿಸ್ತುತರುವಲ್ಲಿ ಸಾರ್ವಜನಿಕರು ಮತ್ತು ಪೋಷಕರು ಕೈ ಜೋಡಿಸಬೇಕಿದೆ ಎಂದು ತಿಳಿಸಿದರು.
 ಸಿವಿಲ್ ನ್ಯಾಯಾಧೀಶರಾದ ಹೆಚ್.ಕೆ.ಉಮೇಶ್, ಸಹಾಯಕ ಸರ್ಕಾರಿ ಅಭಿಯೋಜಕರಾದ ನಾಗರಾಜ್, ವಕೀಲರಾದ ಬಿ.ಎನ್.ಮಂಗಳ, ಬಿ.ಶಿವಕುಮಾರ್, ಚಂದಿರಧರ, ಶಶಿಕುಮಾರ್, ಎಚ್.ಡಿ.ಬಸವರಾಜು, ಎಸ್.ಆರ್.ರಂಗಣ್ಣ, ಶಿವರಾಜ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement