ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಮಾಜಮುಖಿ ವ್ಯಕ್ತಿ, ಸಂಸ್ಥೆ ಯಶಸ್ಸು ಗಳಿಸಲು ಸಾಧ್ಯ

Vishwanath S
Updated On : 1 Aug 2013, 12:27 pm

ಕನ್ನಡಪ್ರಭ ವಾರ್ತೆ , ತುಮಕೂರು , ಜು.31
ಸಮಾಜಮುಖಿ ಆಶಯ ಹೊಂದಿರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ಯಶಸ್ಸು ಗಳಿಸಲು ಸಾಧ್ಯ ಎಂದು ಶಿಕ್ಷಕ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಅವರು ಮೆಳೇಕಲ್ಲಹಳ್ಳಿಯ ಕುಸುಮ ಕಲಾ ಸಂಘದ ಆಶ್ರಯದಲ್ಲಿ ನಡೆದ ಆಷಾಡದಲ್ಲಿ ಗ್ರಾಮೀಣ ಶಾಲಾ ಕಾಲೇಜುಗಳತ್ತ ನಮ್ಮ ರಂಗ ನಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಂದಿನ ದಿನಗಳಲ್ಲಿ ನಾವೆಲ್ಲ ಸಾವಿರಾರು ರು. ಖರ್ಚು ಮಾಡಿ ಅನೇಕ ಪೌರಾಣಿಕ ನಾಟಕಗಳ ಪ್ರದರ್ಶನ ನೀಡಿದ್ದೇವೆ. ಹೆಚ್ಚಿನ ಹಣಕಾಸಿನ ಹೊರೆಯನ್ನು ಹೊರಲಾರದೆ ಕೆಲವೇ ಪ್ರದರ್ಶನಗಳಿಗೆ ಸೀಮಿತಗೊಳಿಸಬೇಕಾಗುತ್ತೆ ಮತ್ತು ಎಲ್ಲಾ ಕಡೆಯು ಅದೇ ರಾಮಾಯಣ, ಮಹಾಭಾರತದ ಕಥಾ ಪ್ರಸಂಗಳೆ. ಆದರೆ ಕುಸುಮ ಕಲಾಸಂಘದವರ ಸಾಧನೆ ವಿನೂತನವಾದದ್ದು ಎಂದು ಪ್ರಶಂಸಿಸಿದರು.
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಹಾಸ್ಯದ ಜೊತೆಯಲ್ಲಿ ಸಾಮಾಜಿನ ಅರಿವು ಮೂಡಿಸುವ ಈ ಕಾರ್ಯಕ್ರಮ ನಿಜಕ್ಕೂ ಅಭಿನಂದನಾರ್ಹ. ರಂಗ ಮಾಧ್ಯಮದಲ್ಲೇ ಪ್ರಭಾವಶಾಲಿಯಾದ ಈ ಬೀದಿ ನಾಟಕಗಳು ನಟರನ್ನು ಪ್ರೇಕ್ಷಕರ ಅತ್ಯಂತ ಸಮೀಪಕ್ಕೆ ಕೊಂಡೊಯ್ದಿದ್ದು ವಿಷಯವನ್ನು ನೋಡುಗನ ಮನಸ್ಸಿಗೆ ನಾಟಿಸುತ್ತದೆ ಎಂದರು.
ನಟನಾದವನಿಗೆ ಸಾಮಾಜಿಕ ಜವಾಬ್ದಾರಿ, ಕಾಳಜಿ, ಅತ್ಯಂತ ಮುಖ್ಯ. ಯಾವುದೇ ವೇಷಭೂಷಣ, ಪೋಷಾಕು, ಪರಿಕರಗಳಿಲ್ಲದೇ ತಾವು ತೊಟ್ಟು ಬಂದಿರುವ ಉಡುಪಿನಲ್ಲೇ, ಬೀದಿಯ ಮಧ್ಯೆ ಪಾತ್ರದೊಳಗೆ ಪ್ರವೇಶಿಸಿ. ಹೋಗುವವನನ ಆಕರ್ಷಿಸಿ, ನೋಡುಗನನ್ನಾಗಿ ಪರಿವರ್ತಿಸಿ ವಿಚಾರವನ್ನ ತಲುಪಿಸಿವಲ್ಲಿ ಇದು ಪ್ರಭಾವಶಾಲಿಯಾಗಿದೆ. ಈ ಕಾರ್ಯದಲ್ಲಿ ತಂಡದ ಕಲಾವಿದರ ಸಾಧನೆ ಮೆಚ್ಚುವಂತಹದ್ದು.
ಅಧ್ಯಕ್ಷತೆ ವಹಿಸಿದ್ದ  ಮುಖ್ಯೋಪಾಧ್ಯಾಯಿನಿ ಸರಸ್ವತಿ ಮಾತನಾಡಿ  ಇಂತಹ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶದ ಶಾಲಾ ಕಾಲೇಜು ಮಕ್ಕಳಲ್ಲಿ ಹೊಸ ಬಗೆಯ ಚಿಂತನೆಯನ್ನ ಹುಟ್ಟು ಹಾಕುವಲ್ಲಿ ಕಾರ್ಯೋನ್ಮುಖವಾಗಿರುವ ತಂಡದ ಎಲ್ಲಾ ಸದಸ್ಯರ, ನಟರ ಶ್ರಮ ಸಾರ್ಥಕವಾದ್ದು. ಈ ಪ್ರದರ್ಶನ ಎಲ್ಲಾ ಗ್ರಾಮೀಣ ಮಕ್ಕಳಿಗೂ ಲಭಿಸಲಿ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement