ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನೇರ ನಗದು ನೆಪದಲ್ಲಿ ಸರ್ಕಾರದ ಕುತಂತ್ರ: ಎಡಪಕ್ಷಗಳಿಂದ ಪ್ರತಿಭಟನೆ

Rashmi Kasaragodu
Updated On : 2 Jun 2013, 12:36 pm

ತುಮಕೂರು: ಕೇಂದ್ರದ ಕಾಂಗ್ರೆಸ್ ಸರ್ಕಾರ ನೇರ ನಗದು ನೆಪದಲ್ಲಿ ಜನ ಸಾಮಾನ್ಯರು ಬಳಸುವ ಅಡಿಗೆ ಅನಿಲ ಪಡಿತರಗಳ ಮೇಲಿನ  ಸಬ್ಸಿಡಿಯನ್ನು ಕಡಿತಗೊಳಿಸುವ ಕುತಂತ್ರವನ್ನು ಜಾರಿಗೊಳಿಸಲು ಹೊರಟಿದೆ ಎಂದು ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಸೈಯದ್ ಮುಜೀಬ್ ಆರೋಪಿಸಿದ್ದಾರೆ.
ತುಮಕೂರು ನಗರದ ಸ್ವತಂತ್ರ ಚೌಕದಲ್ಲಿ ಸಿಪಿಐ, ಸಿಪಿಐ (ಎಂ),ಸಿಐಟಿಯು, ಎಐಟಿಯುಸಿ, ಡಿವೈಎಫ್ಐ, ಮತ್ತು ಎಡ ಸಂಘಟನೆಗಳು ನಡೆಸಿದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ  ಎಲ್.ಪಿ.ಜಿ ಅಡಿಗೆ ಅನಿಲ ಆಹಾರ ಸಬ್ಸಿಡಿಗಳನ್ನು  ಶೂನ್ಯಕ್ಕೆ ತರುವ ವಿಶ್ವಬ್ಯಾಂಕ್ ನಿರ್ದೇಶಿತ  ನೀತಿಯನ್ನು ಜಾರಿಗೆ ತರಲು ಹೋರಟಿದೆ ಎಂದು ಮುಜೀಬ್ ಆರೋಪಿಸಿದರು ಕೇಂದ್ರ ಸರ್ಕಾರವು ವಿದ್ಯಾರ್ಥಿ ವೇತನ, ಸಾಮಾಜಿಕ ಭದ್ರತೆಗಾಗಿ ನೀಡುವ ಪಿಂಚಣಿಗಳಿಗೆ ನೇರನಗದು ಯೋಜನೆಗಳು ಜನತೆಗೆ ಸಹಕಾರಿಯಾಗಿವೆ. ಇದನ್ನು ಎಡಪಕ್ಷಗಳು ಸ್ವಾಗತಿಸುತ್ತವೆ ಆದರೆ ಇದನ್ನು ಹೊರತುಪಡಿಸಿ ಅಡಿಗೆ ಅನಿಲ, ಬಡಜನರಿಗೆ ದೊರೆಯುವ ಆಹಾರ ಸಬ್ಸಿಡಿಗಳನ್ನು ನೇರನಗದು ಯೋಜನೆಯಿಂದ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಂಬೇಗೌಡ ಮಾತನಾಡಿ ಕೇಂದ್ರ ಸರ್ಕಾರ ಮೊದಲ ಹಂತವಾಗಿ ಎಲ್.ಪಿ.ಜಿ ಗ್ಯಾಸ್ನ ಸಬ್ಸಿಡಿ ಹಣವನ್ನು ಗ್ರಾಹಕರ ಖಾತೆಗೆ ಹಾಕುವ ಕೆಲಸವನ್ನು ಪ್ರಯೋಗಿಕವಾಗಿ ತುಮಕೂರು ಜಿಲ್ಲೆಯಲ್ಲಿ ಪ್ರಾರಂಬಿಸುತ್ತಿದ್ದು ಇದರಲ್ಲಿ ಹಂತ ಹಂತವಾಗಿ ಸಬ್ಸಿಡಿ ಹಣವನ್ನು ಕಡಿತ ಮಾಡುವ ಹುನ್ನಾರ ಅಡಗಿದ್ದು ಇದನ್ನು ಎಡಪಕ್ಷಗಳು ವಿರೋಧಿಸುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement