ವಿಜಯಲಕ್ಷ್ಮೀ ನೇತ್ರದಾನ
ತುಮಕೂರು: ತುಮಕೂರು ಎಂ,ಜಿ ರಸ್ತೆ ಮೊದಲನೇ ಕ್ರಾಸ್ನಲ್ಲಿರುವ ವಿಜಯಲಕ್ಷ್ಮೀ ಮೆಡಿಕಲ್ಸ್ ಮಾಲೀಕ ಜಯರಾಮ್ ರ ಪತ್ನಿ ವಿಜಯಲಕ್ಷ್ಮೀ ನಿಧನರಾಗಿದ್ದು ಅವರ ಎರಡು ಕಣ್ಣುಗಳನ್ನು ಅವರ ಕುಟುಂಬದವರು ದಾನ ನೀಡಿದ್ದಾರೆ.
ಎನ್.ಎಸ್. ಐ ಕಲೆಕ್ಷನ್ ಸೆಂಟರ್ ಮುಖ್ಯಸ್ಥ ಎನ್.ಎನ್. ಶ್ರೀಧರ್, ನಾಗದೀಶ್ ಎನ್.ಎಸ್., ಹಾಗೂ ತುಮಕೂರುನ ಮಹದೇವಪ್ಪ ಕಣ್ಣಿನ ಆಸ್ಪತ್ರೆಯ ಹೆಸರಾಂತ ನೇತ್ರತಜ್ಞ ಡಾ. ಸಂಜಯ್ ಎಮ್ ಅವರ ಸಹಕಾರದೊಂದಿಗೆ ಪಡೆದ ಎರಡು ಕಣ್ಣುಗಳನ್ನು ಬೆಂಗಳೂರಿನ ಲಯನ್ಸ್ ಕಣ್ಣಿನ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.
ಈ ಕಾರ್ಯದಿಂದ ಎರಡು ದೃಷ್ಟಿಹೀನರಿಗೆ ದಷ್ಟಿಕೊಟ್ಟಂತಾಗಿ ಪಡೆದ ಭಾಗ್ಯವಂತರು ಎನ್.ಎಸ್.ಐ. ಕಲೆಕ್ಷನ್ ಸೆಂಟರ್ ಮೃತರಿಗೆ ಶಾಂತಿ ಸಿಗಲೆಂದು ಹಾಗೂ ಅವರ ಕುಟುಂಬದವರಿಗೆ ದುಃಖ ಸಹಿಸುವಂತಹ ಶಕ್ತಿ ದೇವರು ಕರುಣಿಸಲೆಂದು ಪ್ರಾರ್ಥಿಸಿದ್ದಾರೆ.
ಇದೇ ರೀತಿ ನೇತ್ರದಾನ ಹಾಗೂ ದೇಹದಾನ ಮಾಡುವವರು ಸ್ಥಳೀಯ ತಜ್ಞರನ್ನಾಗಲಿ ಅಥವಾ ಎನ್.ಎನ್. ಶ್ರೀಧರ್, ಮುಖ್ಯಸ್ಥರು, ಎನ್.ಎಸ್.ಐ. ಕಲೆಕ್ಷನ್ ಸೆಂಟರ್, ಎನ್.ಎಸ್. ಜ್ಯೂಯಲರಿ ಪ್ಯಾಲೇಸ್, ಬಿ.ಹೆಚ್. ರಸ್ತೆ, ತುಮಕೂರು ದೂರವಾಣಿ 0816-2273479 ಸಂಪರ್ಕಿಸಲು ಕೋರಲಾಗಿದೆ.