ಸಿಎಂ ಸಿದ್ದುಗೆ ಬಸವರಾಜ್ ಮನವಿ
ತುಮಕೂರು: ರಾಜ್ಯದ ಎರಡನೇ ಅತಿದೊಡ್ಡ ಜಿಲ್ಲೆಯಾಗಿರುವ ತುಮಕೂರು ಜಿಲ್ಲೆಗೆ ಶಾಶ್ವತ ಕುಡಿಯುವ ನೀರೊದಗಿಸುವ ಪರಮಶಿವಯ್ಯ ವರದಿ ಹೇಮಾವತಿ ಪ್ಲಡ್ ಕೆನಾಲ್, ಎತ್ತಿನಹೊಳೆ ಯೋಜನೆಯನ್ನೊಳಗೊಂಡ ವಾಟರ್ಗ್ರಿಡ್ ಕೆನಾಲ್ ಯೋಜನೆ ಜಾರಿಗೊಳಿಸುವಂತೆ ತುಮಕೂರು ಸಂಸದ ಜಿ.ಎಸ್. ಬಸವರಾಜು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿದರು. ಬಯಲು ಸೀಮೆಯ 10 ಸಾವಿರ ಕೆರೆಗಳಿಗೆ ನೀರೊದಗಿಸುವ ಈ ಯೋಜನೆಯನ್ನು ಜಾರಿಗೊಳಿಸುವಂತೆ ಮನವಿ ಮಾಡಿದರು. ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದ ವೇಳೆ ವಿಧಾನಸಭೆಯಲ್ಲಿ ಪರಮಶಿವಯ್ಯ ವರದಿ ಜಾರಿಗೆ ಬೆಂಬಲ ನೀಡಿದ್ದನ್ನು ಜಿಎಸ್ಬಿ ನೆನಪಿಸಿದರು. ಹಾಗೆಯೇ ನಿಮ್ಜ್ ಯೋಜನೆಗೆ ಬೇಕಾಗಿರುವ ಜಾಗ, ಟೆಕ್ನಾಲಜಿ ಪಾರ್ಕ್ಗೆ ಸಹಕರಿಸುವಂತೆ ಜಿಎಸ್ಬಿ ಮನವಿ ಮಾಡಿದರು.