ಅಕ್ರಮ ಮರಳು ಸಾಗಾಣಿಕೆ: ಲಾರಿ ವಶ
ಸಕಲೇಶಪುರ: ಅಕ್ರಮ ಮರಳು ಸಾಗಾಣಿಕೆ ಲಾರಿಯನ್ನು ಪಟ್ಟಣ ಸಮೀಪ ಈಚೆಗೆ ವಶಪಡಿಸಿಕೊಳ್ಳಲಾಗಿದೆ.ಹೇಮಾವತಿ ನದಿಯಿಂದ ಅಕ್ರಮವಾಗಿ ಮರಳು ಸಾಗಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ವಿಶೇಷ ಜಾಗೃತದಳದ ಸಿಬ್ಬಂದಿ ಪಟ್ಟಣ ಸಮೀಪದ ಹಾಲೇಬೇಲೂರು ರಸ್ತೆಯಲ್ಲಿ ಮರಳು ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.ಈ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಅಕ್ರಮ ಮರಳು ಸಾಗಾಟ ಮಾಡುತ್ತಿದ್ದ ವ್ಯಕ್ತಿ ತನಿಖಾ ದಳದ ಅಧಿಕಾರಿಗಳ ವಿರುದ್ಧ ಏಕವಚನದಲ್ಲೇ ಹರಿಹಾಯ್ದರು. ಅಲ್ಲದೆ ಲಾರಿ ತಡೆದಿದ್ದ ಪಟ್ಟಣ ಪೋಲಿಸ್ ಠಾಣೆಯ ಪೇದೆಯೊಬ್ಬರಿಗೆ ನಿನ್ನನ್ನು ಇಲ್ಲಿಂದ ಎತ್ತಂಗಡಿ ಮಾಡಿಸುವುದಾಗಿ ಬೆದರಿಕೆ ಒಡ್ಡಿದ್ದಾರೆ. ಅಕ್ರಮ ಮರಳು ಸಾಗಾಟಗಾರನ ರೋಷಾವೇಷದಿಂದ ಬೆಚ್ಚಿಬಿದ್ದ ಸ್ಥಳದಲ್ಲಿದ್ದ ಅಧಿಕಾರಿಗಳ ತಂಡ ಕೆಲಕಾಲ ಮೌನವಹಿಸಿದ್ದರು.