ತಂಬಾಕುಉತ್ಪನ್ನಗಳನ್ನೂ ನಿಷೇಧಿಸಲಿ
ಹಾಸನ: ಗುಟ್ಕಾ ನಿಷೇಧಿಸಿರುವ ರಾಜ್ಯ ಸರ್ಕಾರ ತಂಬಾಕು ಉತ್ಪನ್ನ ಸೇರಿದಂತೆ ಎಲ್ಲಾ ಬಗೆಯ ಮಾದಕ ವಸ್ತುಗಳನ್ನು ನಿಷೇಧಿಸಬೇಕು ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಡಳಿತದಲ್ಲಿ ಏನು ಮಾಡಬೇಕು ಎನ್ನುವ ದಿಕ್ಕಿನಲ್ಲಿ ಚಿಂತನೆ ನಡೆಸದೆ ಅವಸರದಲ್ಲಿ ತಂಬಾಕು ವಿರೋಧಿ ದಿನದಂದು ಗುಟ್ಕಾ ನಿಷೇಧ ಮಾಡುವ ಮೂಲಕ ಅಡಿಕೆ ಬೆಳೆಯುವ ರೈತರಿಗೆ ಅನ್ಯಾಯ ಮಾಡಿದೆ. ಗುಟ್ಕಾ ಸೇವನೆಯಿಂದ ಕ್ಯಾನ್ಸರ್ನಂತಹ ಕಾಯಿಲೆಗಳು ಬರುತ್ತವೆ. ಅಂಥದ್ದೆ ಕಾಯಿಲೆಗಳಿಗೆ ಕಾರಣವಾಗುವ ಸಿಗರೇಟ್ ಮತ್ತಿತರೇ ವಸ್ತುಗಳನ್ನು ನಿಷೇಧಿಸಲು ಮುಂದಾಗಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.