ಸತ್ಯಸಾಯಿ ಬಾಬಾ ರಥೋತ್ಸವ
ಹಾಸನ: ಈಶ್ವರಾಂಬ ದಿನಾಚರಣೆ ಮತ್ತು ಸತ್ಯಸಾಯಿಪಾದುಕಾ, ನಗರ ಪ್ರವೇಶೋತ್ಸವ ಹಾಗೂ 11ನೇ ವಾರ್ಷಿಕೋತ್ಸವದ ಅಂಗವಾಗಿ ಸತ್ಯಸಾಯಿ ಸೇವಾ ಸಂಸ್ಥೆಯಿಂದ ಭಾನುವಾರ ಬಾಬಾ ಭಾವಚಿತ್ರ ರಥೋತ್ಸವ ವಿಜೃಂಭಣೆಯಿಂದ ನಡೆಸಲಾಯಿತು. ನಗರದ ಕೆ.ಆರ್. ಪುರಂ, 11ನೇ ಕ್ರಾಸ್ನಲ್ಲಿರುವ ಸತ್ಯಸಾಯಿ ಸೇವಾ ಕ್ಷೇತ್ರದಿಂದ ಹೊರಟ ಬಾಬಾ ಭಾವಚಿತ್ರ ರಥೋತ್ಸವ ಪೂರ್ಣಕುಂಭ, ವೇದಘೋಷ ನಗರ ಕೀರ್ತನೆಗಳೊಡನೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಬಂತು. ಸೇವಾ ಸಂಸ್ಥೆಯ ಸಂಚಾಲಕರು, ಸಂಯೋಜಕರು ಮತ್ತು ಸದಸ್ಯರು ಹಾಗೂ ಪ್ರಶಾಂತಿ ಸೇವಾ ಟ್ರಸ್ಟಿನ ಅಧ್ಯಕ್ಷ, ಮ್ಯಾನೇಜಿಂಗ್ ಟ್ರಸ್ಟಿಗಳು ಇದ್ದರು.