ಇಬ್ಬರು ಲೋಕಾಯುಕ್ತ ಬಲೆಗೆ
ಮಾಲೂರು: ನ್ಯಾಯಲಯದಲ್ಲಿ ಪ್ರಕರಣದ ವಿಚಾರಣೆ ಬಾಕಿ ಇರುವ ಜಮೀನಿಗೆ ಖಾತೆ ಮಾಡಿಕೊಡದಂತೆ ತಡೆಯಲು ದೂರುದಾರನಿಂದ 50 ಸಾವಿರ ಲಂಚ ಕೇಳಿದ ಉಪ ತಹಸೀಲ್ದಾರ್ ಸೇರಿದಂತೆ ರೆಕಾರ್ಡ್ ಸೆಕ್ಷನ್ ಅಧಿಕಾರಿಗಳಿಬ್ಬರು ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಸೋಮವಾರ ಸಂಜೆ ಇಲ್ಲಿನ ಮಿನಿ ವಿಧಾನಸೌಧದಲ್ಲಿ ನಡೆದಿದೆ. ತಾಲೂಕಿನ ಲಕ್ಕೂರು ನಾಡಕಚೇರಿಯ ಉಪತಹಸೀಲ್ದಾರ್ ರಾಮಚಂದ್ರ, ಮಿನಿ ವಿಧಾನಸೌಧದ ರೆಕಾರ್ಡ್ ರೂಂನ ಬಾಲಕೃಷ್ಣ ದೂರುದಾರ ಚಿಕ್ಕತಿರುಪತಿಯ ದೇವರಾಜ್ನಿಂದ 50000 ಲಂಚ ಪಡೆಯುವಾಗ ಲೋಕಾಯುಕ್ತ ಎಸ್.ಪಿ. ಸುಧಾಕರ್ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದಾರೆ.