ಗುಟ್ಕಾ ನಿಷೇಧ ಸ್ವಾಗತಾರ್ಹ: ಸತೀಶ್
ತಿಪಟೂರು: ಇಂದಿನ ಯುವ ಜನತೆ ಯಥೇಚ್ಛವಾಗಿ ತಂಬಾಕು ಚಟಕ್ಕೆ ದಾಸರಾಗುತ್ತಿದ್ದು, ಇದನ್ನು ಪರಿಗಣಿಸಿ ಸರ್ಕಾರ ಗುಟ್ಕಾ ಮಾರಾಟವನ್ನು ನಿಷೇಧಿಸಿರುವುದು ಸ್ವಾಗತಾರ್ಹ ಎಂದು ಕಲ್ಪತರು ಜನಪರ ಯುವ ವೇದಿಕೆ ಸತೀಶ್ ತಿಳಿಸಿದ್ದಾರೆ.
ಇದೊಂದು ಸಮಾಜಘಾತುಕ ಪಿಡುಗಾಗಿದ್ದು, ಯುವ ಜನತೆ ಗುಟ್ಕಾ, ಸ್ಟಾರ್, ಪಾನ್ ಮಸಾಲ ಸೇರಿದಂತೆ ಮತ್ತಿತರೆ ಮಾದಕ ದ್ರವ್ಯಗಳ ದುಶ್ಚಟದ ದಾಸರಾಗಿ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳಿಗೆ ತುತ್ತಾಗುತ್ತಿದ್ದು, ಯುವಶಕ್ತಿ ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿದೆ ಎಂದರು. ಇದನ್ನು ಮನಗಂಡ ನೂತನ ಸರ್ಕಾರ ಜನರ ಆರೋಗ್ಯಕ್ಕೆ ಮಾರಕವಾಗಿರುವ ಗುಟ್ಕಾ ಮತ್ತು ತಂಬಾಕು ಅಂಶವಿರುವ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಿರುವುದು ನಿಜಕ್ಕೂ ಶ್ಲಾಘನೀಯವೆಂದು ಕಲ್ಪತರು ಜನಪರ ಯುವ ವೇದಿಕೆ ಸತೀಶ್ ಹೇಳಿದ್ದಾರೆ.