ಪ್ರತಿಭಾವಂತವಿದ್ಯಾರ್ಥಿಗಳಿಗೆ ಪುರಸ್ಕಾರ
ತುಮಕೂರು: ಜಿಲ್ಲಾ ಜಯಕರ್ನಾಟಕ ವಿದ್ಯಾರ್ಥಿ ಘಟಕದಿಂದ ಎಸ್ಎಸ್ಎಲ್ಸಿ, ದ್ವಿತೀಯ ಪಿಯುಸಿಯಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಎಸ್ಎಸೆಎಲ್ಸಿ ವಿದ್ಯಾರ್ಥಿಗಳು ಶೇ. 85 ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಶೇ. 80 ರಷ್ಟು ಮೇಲ್ಪಟ್ಟು ಗಳಿಸಿದ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ ಮತ್ತು ಎರಡು ಭಾವಚಿತ್ರ ಹಾಗೂ ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನೋಂದಾಯಿಸಿ ಅರ್ಜಿಯನ್ನು ಜಿಲ್ಲಾ ಜಯಕರ್ನಾಟಕ ಕಚೇರಿ ಮೊದಲನೇ ಮಹಡಿ, ಜಿ.ಎನ್. ಟವರ್ಸ್, ಎನ್ಇಪಿಎಸ್ ಎದುರು, ಬಿ.ಎಚ್. ರಸ್ತೆ, ತುಮಕೂರು ಇಲ್ಲಿಗೆ ಕಳುಹಿಸಲು ಕೋರಲಾಗಿದೆ.
ಪ್ರಾಣಾಯಾಮದಿಂದ ಉತ್ತಮ ಆರೋಗ್ಯ
ಹಾಸನ: ಯೋಗಾಸನ ಮತ್ತು ಪ್ರಾಣಾಯಾಮವನ್ನು ಕ್ರಮಬದ್ಧವಾಗಿ, ಲಯಬದ್ಧವಾಗಿ ಮಾಡುವುದರಿಂದ ಆರೋಗ್ಯ ಉತ್ತಮವಾಗಿಟ್ಟುಕೊಳ್ಳಬಹುದು ಎಂದು ಯೋಗ ಗುರು ಶಂಕರನಾರಾಯಣ ಶಾಸ್ತ್ರಿ ಹೇಳಿದರು.