ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಮಳೆಗಾಗಿ ಕಾಮೇನಹಳ್ಳಿಯಲ್ಲಿ ಹೂತ ಶವ ತೆಗೆದು ಸುಟ್ಟರು!

Rashmi Kasaragodu
Updated On : 3 Jun 2013, 11:48 am

ಆಲೂರು: ಮಳೆಯಾಗಲಿಲ್ಲ ಎಂದು ಮೂರು ತಿಂಗಳ ಹಿಂದೆ ಹೂತಿದ್ದ ಹೆಣವನ್ನು ಸಮಾಧಿಯಿಂದ ಹೊರ ತೆಗೆದು ಮರು ಸಂಸ್ಕಾರ ಮಾಡಿದ ಘಟನೆ ತಾಲೂಕಿನ ಕುಂದೂರು ಹೋಬಳಿ ಕಾಮೇನಹಳ್ಳಿಯಲ್ಲಿ ಜರುಗಿದೆ.
ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು ಕೆಲವು ಪ್ರದೇಶಗಳಲ್ಲಿ ಮಾತ್ರ ಮಳೆ ಬರುತ್ತಿರಲಿಲ್ಲ. ಕೆಲ ರೈತರು ತೊನ್ನು ರೋಗ ಹತ್ತಿದ ವ್ಯಕ್ತಿ ಸತ್ತಾಗ ಮಣ್ಣು ಮಾಡಿದ್ದರಿಂದ ಹೀಗಾಗುತ್ತಿದೆ ಎಂದು ಭಾವಿಸಿ ಈ ದುಷ್ಕೃತ್ಯವೆಸಗಿದ್ದಾರೆ. ಗ್ರಾಮದ ನಂಜೇಗೌಡ(84) ಎಂಬಾತ ಮಾರ್ಚ್ 9ರಂದು ಮೃತಪಟ್ಟಿದ್ದರು. ಆ ಶವವನ್ನು ಗ್ರಾಮದ ಹೊರ ಭಾಗದಲ್ಲಿ ಹೂಳಲಾಗಿತ್ತು. ಮೂರು ದಿನಗಳ ಹಿಂದೆ ಈ ಶವವನ್ನು ಭೂಮಿಯಿಂದ ಹೊರ ತೆಗೆದು ಮಕಾಡೆಯಾಗಿ ಶವವನ್ನು ಮಲಗಿಸಲಾಗಿತ್ತು. ನಿರ್ಜನ ಪ್ರದೇಶವಾದ ಈ ಜಾಗದಲ್ಲಿ ಯಾರೂ ಬಾರದ ಕಾರಣ ವಿಷಯ ಗ್ರಾಮಸ್ಥರಿಗೆ ತಿಳಿದಿಲ್ಲ. ದನಗಾಹಿಗಳು ಈ ಭಾಗಕ್ಕೆ ಸೋಮವಾರ ಬಂದಾಗ ಶವವನ್ನು ನೋಡಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ. ಗ್ರಾಮಸ್ಥರು ಭಯಭೀತರಾಗಿ ಸ್ಥಳಕ್ಕೆ ದೌಡಾಯಿಸಿದ್ದು ನಂತರ ಶವವನ್ನು ಸುಡುವ ಮೂಲಕ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement