ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಗುಬ್ಬಿ- ಮದ್ದೂರು ರಾಹೆ ಕಾಮಗಾರಿಗೆ ತಡೆಯಿಲ್ಲ

Rashmi Kasaragodu
Updated On : 5 Jun 2013, 12:12 pm

ಬೆಂಗಳೂರು: ತುಮಕೂರು ಜಿಲ್ಲೆ ಗುಬ್ಬಿಯಿಂದ ಮಂಡ್ಯ ಜಿಲ್ಲೆಯ ಮದ್ದೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಮುಂದುವರಿಸಲು ಹೈಕೋರ್ಟ್ ಅನುಮತಿ ನೀಡಿದ್ದು, ಮರ ಕಡಿಯುವ ಪ್ರಸ್ತಾವನೆಯನ್ನು ಮರಾಧಿಕಾರಿಯ ಮುಂದಿಟ್ಟು ಪರವಾನಗಿ ಪಡೆಯುವಂತೆ ಆದೇಶಿಸಿದೆ.
ಹೆದ್ದಾರಿ ನಿರ್ಮಾಣಕ್ಕಾಗಿ ಸಾವಿರಾರು ಮರಗಳ ಹನನ ಮಾಡಲಾಗುತ್ತಿದೆ ಎಂಬ ಪತ್ರದ ಆಧಾರದ ಮೇಲೆ ದಾಖಲಿಸಿಕೊಂಡ ಸ್ವಯಂ ಪ್ರೇರಿತ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಡಿ.ಎಚ್. ವಘೇಲ ಹಾಗೂ ನ್ಯಾ.ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಗುಬ್ಬಿಯಿಂದ ಮದ್ದೂರಿನವರೆಗೆ ರಸ್ತೆ ನಿರ್ಮಾಣಕ್ಕಾಗಿ ಸುಮಾರು 4000 ಮರಗಳನ್ನು ಕಡಿಯಲು ತುಮಕೂರು ನಗರಸಭೆ ಅನುಮತಿ ನೀಡಿದೆ. ಇದರಿಂದ ಪರಿಸರಕ್ಕೆ ಹಾನಿಯಾಗುತ್ತದೆ. ಅಲ್ಲದೆ, ಅಪರೂಪದ ಮರಗಳನ್ನು ಕಡಿಯುವುದರಿಂದ ರಾಜ್ಯದ ಬೊಕ್ಕಸಕ್ಕೆ ಕೂಡ ಹಾನಿಯಾಗುತ್ತದೆ ಎಂದು ಅರುಣ್‌ಕುಮಾರ್ ಎಂಬವರು ಹೈಕೋರ್ಟ್‌ಗೆ ಪತ್ರ ಬರೆದಿದ್ದರು. ಆದರೆ, ಮಂಗಳವಾರ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ(ಕೆಶಿಫ್ ಸಂಸ್ಥೆ) ತಾವು 2 ಸಾವಿರ ಮರಗಳನ್ನು ಕಡಿಯುವ ಹೊಸ ಪ್ರಸ್ತಾವನೆಯನ್ನು ಮುಂದಿಟ್ಟರು. ಅದನ್ನು ಮರಾಧಿಕಾರಿಯ ಮುಂದಿಟ್ಟು ಅನುಮತಿ ಪಡೆಯುವಂತೆ ಆದೇಶಿಸಿದ ಪೀಠ ವಿಚಾರಣೆಯನ್ನು ಮುಂದೂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement