ಜೈಲಿನಲ್ಲಿ ಆರೋಪಿ ಸಾವು
ಮಂಗಳೂರು: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯೊಬ್ಬ ಮಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿ ಕುಂಪಲ ಆಶ್ರಯ ಕಾಲೋನಿ ನಿವಾಸಿ ನವೀನ್ ಪೂಜಾರಿ(43). ಜೈಲಿನಲ್ಲಿ ತೀವ್ರ ಅಸ್ವಸ್ಥಗೊಂಡಿದ್ದ ಈತನನ್ನು ಜೂ.1ರಂದು ನಗರದ ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಗುಣಮುಖಗೊಂಡಿದ್ದ ಈತ ಜೂ.2ರಂದು ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆ ಎದುರಿಸಿದ್ದ. ಆದರೆ ಮಂಗಳವಾರ ಏಕಾಏಕಿ ತೀವ್ರ ಅಸ್ವಸ್ಥಗೊಂಡ ಈತ ಮಧ್ಯಾಹ್ನ ಕೊನೆಯುಸಿರೆಳೆದಿದ್ದು, ಹೃದಯಾಘಾತವಾಗಿರಬೇಕು ಎಂದು ಜೈಲಿನ ಅಧಿಕಾರಿಗಳು ಶಂಕಿಸಿದ್ದಾರೆ. ಈತನನ್ನು ಉಳ್ಳಾಲ ಪೊಲೀಸರು ಮೇ 20ರಂದು ಬಂಧಿಸಿದ್ದರು.