ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಡೆಂಘೀಗೆ ಬಲಿಯಾದ ಯೋಧನ ಅಂತ್ಯಕ್ರಿಯೆ

Rashmi Kasaragodu
Updated On : 5 Jun 2013, 12:12 pm

ಅಥಣಿ: ಮಾರಣಾಂತಿಕ ಡೆಂಘೀ ಜ್ವರಕ್ಕೆ ಮಧ್ಯಪ್ರದೇಶದ ಝಾನ್ಸಿಯಲ್ಲಿ ಬಲಿಯಾದ ತಾಲೂಕಿನ ಅಡಹಳಟ್ಟಿ ಗ್ರಾಮದ ಯೋಧ ಶಂಕರ ಬಾಬು ನಂದಿವಾಲೆ (26) ಅಂತ್ಯಕ್ರಿಯೆ ಮಂಗಳವಾರ ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಅಥಣಿ ತಹಸೀಲ್ದಾರ್ ಜಿ.ಆರ್. ಶೀಲವಂತರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಕಳೆದ 15 ದಿನಗಳ ಹಿಂದೆ ರಜೆ ಪಡೆದು ಸ್ವ ಗ್ರಾಮದ ಜಾತ್ರೆಗೆ ಆಗಮಿಸಿದ್ದ ಯೋಧ ಕರ್ತವ್ಯಕ್ಕೆ ತೆರಳುತ್ತಿರುವಾಗಲೇ ಜ್ವರದಿಂದ ಬಳಲುತ್ತಿದ್ದರು. ಝಾನ್ಸಿಗೆ ತೆರಳುವ ಮಾರ್ಗದಲ್ಲಿಯೇ ತೀವ್ರ ಅಸ್ವಸ್ಥರಾದ ಅವರ ತಪಾಸಣೆ ಮಾಡಿದಾಗ ಡೆಂಘೀ ಇರುವುದು ಖಚಿತವಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಲಖನೌ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಭಾನುವಾರ ಅಸುನೀಗಿದ್ದರು.  ಯೋಧ ಶಂಕರ ನಂದಿವಾಲೆ ಪಾರ್ಥಿವ ಶರೀರವನ್ನು ಮಂಗಳವಾರ ಅಥಣಿಗೆ ತಂದು, ಬಳಿಕ ಸ್ವಗ್ರಾಮಕ್ಕೆ ತರಲಾಯಿತು. ಮೃತ ಯೋಧನ ಪತ್ನಿ, ಮಕ್ಕಳು, ತಂದೆ-ತಾಯಿ ಹಾಗೂ ಸಂಬಂಧಿಗಳ ಆಕ್ರೋಶ ಮುಗಿಲು ಮುಟ್ಟಿತ್ತು. ಗ್ರಾಮಸ್ಥರು ಮತ್ತು ಬಂಧು-ಬಳಗದವರ ಶೋಕ ಸಾಗರದ ಮಧ್ಯೆ ಅಂತ್ಯಕ್ರಿಯೆ ಜರುಗಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement