ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನಕಲಿ ರಸಗೊಬ್ಬರ ಮಾರಾಟ: ಏಳು ಆರೋಪಿಗಳ ಬಂಧನ

Rashmi Kasaragodu
Updated On : 5 Jun 2013, 12:11 pm

ಹಾಸನ: ನಕಲಿ ರಸಗೊಬ್ಬರ ಮಾರಾಟ ಮಾಡಿ ರೈತರನ್ನು ವಂಚಿಸುತ್ತಿದ್ದ ಸಹಕಾರ ಸಂಘಗಳ ಇಬ್ಬರು ಕಾರ್ಯದರ್ಶಿ ಸೇರಿದಂತೆ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.  
ಬೇಲೂರು ತಾಲೂಕು ಅನಘಟ್ಟ ಗ್ರಾಮದ ಸಹಕಾರ ಸಂಘದ ಕಾರ್ಯದರ್ಶಿ ಜಯರಾಂ, ಸಹಾಯಕ ನಂದೀಶ್, ಏಜೆಂಟ್ ಶಿವಶಂಕರಪ್ಪ ಎಂಬುವರನ್ನು ಬಂಧಿಸಿ 250 ಚೀಲ (ಪ್ರತಿ ಚೀಲದಲ್ಲಿ 50 ಕೆಜಿ ಗೊಬ್ಬರ ಇರುತ್ತದೆ) ರಸಗೊಬ್ಬರ ಮತ್ತು ಸಕಲೇಶಪುರ ತಾಲೂಕಿನ ಹಾನಬಾಳು ಸಹಕಾರ ಸಂಘದ ಕಾರ್ಯದರ್ಶಿ ಅಶೋಕ್, ಏಜೆಂಟ್‌ರಾದ ವಿರುಪಾಕ್ಷ, ನಾಗಣ್ಣ ಎಂಬುವರನ್ನು ಇತ್ತೀಚೆಗೆ ಬಂಧಿಸಿ 300 ಚೀಲ ರಸಗೊಬ್ಬರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮತ್ತೊಬ್ಬನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅತ್ಯಂತ ಬೇಡಿಕೆ ಇರುವ ಪೊಟ್ಯಾಷ್ ರಸಗೊಬ್ಬರಕ್ಕೆ ಕಲರ್ ಮಿಶ್ರಣ ಮಾಡಿ ಆರೋಪಿಗಳು ಮಾರಾಟ ಮಾಡುತ್ತಿದ್ದರು.
ಜಿಲ್ಲಾದ್ಯಂತ ಪೊಲೀಸರು ನಕಲ ರಸಗೊಬ್ಬರ ಮಾರಾಟಗಾರರ ಜಾಲದ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡಿದ್ದು, ಜಿಲ್ಲಾಧಿಖಾರಿಗಳ ನೇತೃತ್ವದಲ್ಲಿ ಉತ್ತಮ ಗುಣಮಟ್ಟದ ರಸಗೊಬ್ಬರ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವರಾಜ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement